ಕಾರ್ಕಳ : ಮೂಡಬಿದ್ರೆಯ ಸಂಪಿಗೆ ಗ್ರಾಮದ ಇಲಿಯಾಸ್ ಲ್ಯಾಂಡ್ ಲಿಂಕ್ಸ್ ಮಾಡಿಕೊಂಡಿದ್ದು ಈತ ಮಂಗಳೂರು ಬೈಕಂಪಾಡಿಯ ಹಬೀಬ್ ಎಂಬಾತನೊಂದಿಗೆ ಹಣದ ವ್ಯವಹಾರ ಹೊಂದಿದ್ದರು. ಹಬೀಬ್ ಅವರಿಗೆ ಇಲಿಯಾಸ್ ಹಣ ನೀಡಲಿದ್ದು, ಹಣವನ್ನು ಸಂದೀಪ್ ಭಟ್ ಎಂಬುವವರು ತೀರಿಸುವುದಾಗಿ ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ಸಂದೀಪ್ ಭಟ್ ಪ್ರಸ್ತುತ ದೆಹಲಿಗೆ ತೆರಳಿದ್ದು, ಅವರು ಹಬೀಬ್ ನ ಫೋನ್ ರಿಸೀವ್ ಮಾಡಲಿಲ್ಲ ಎಂದು ಹಬೀಬ್ ಆತನ ಅಣ್ಣ ಸಿದ್ದೀಕ್ ಎಂಬಾತನೊಂದಿಗೆ ಜ. 24ರಂದು ಇಲಿಯಾಸ್ ಕೆಲಸ ಮಾಡುತ್ತಿದ್ದ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮಂಗಲಪಾದೆ ಎಂಬಲ್ಲಿಗೆ ಅಕ್ರಮ ಪ್ರವೇಶ ಮಾಡಿ ತಕರಾರು ಮಾಡಿರುತ್ತಾರೆ. ಇಲಿಯಾಸ್ ಅವರಿಗೆ ಪಿಕಾಸಿನ ಮರದ ಹಿಡಿಯಿಂದ ಹೊಡೆದು, ಹಣಕೊಡದಿದ್ದರೆ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿರುತ್ತಾರೆ. ಚಿಕಿತ್ಸೆಗಾಗಿ ಕಾರ್ಕಳ ಸ್ಪಂದನ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on