ಮೆಲ್ಬರ್ನ್: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಡಳಿ(ಐಸಿಸಿ) ಶುಕ್ರವಾರ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ಪಂದ್ಯಗಳು ಪ್ರಾರಂಭವಾಗಲಿದ್ದು, ನವೆಂಬರ್ 10 ರಂದು ಫೈನಲ್ ನಡೆಯಲಿದೆ. ಅ.23 ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಎದುರಾಳಿಯಾಗಿ ಪಾಕಿಸ್ಥಾನದ ವಿರುದ್ದ ಸೆಣೆಸಾಡಲಿದ್ದು ಆಸ್ಟ್ರೇಲಿಯಾದ ಮೆಲ್ಬರ್ನ್, ಸಿಡ್ನಿ, ಬ್ರಿಸ್ಬೇನ್, ಅಡಿಲೇಡ್, ಜಿಲಾಂಗ್, ಹೋಬರ್ಟ್, ಮತ್ತು ಪರ್ತ್ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ʼಎʼ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್,ನ್ಯೂಜಿಲೆಂಡ್, ಅಫ್ಘಾನಿಸ್ತಾನ ತಂಡಗಳಿದ್ದು ʼಬಿʼ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ.
ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತಕ್ಕೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್ ಅಪ್ ನ್ಯೂಜಿಲೆಂಡ್, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳಿ ನೇರ ಅರ್ಹತೆ ಪಡೆದುಕೊಂಡಿದೆ.
ಮೊದಲ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ಸೂಪರ್-12 ಸುತ್ತಿಗೆ
ಶ್ರೀಲಂಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ನಮೀಬಿಯಾ ಈ ನಾಲ್ಕು ತಂಡಗಳಿಗೆ ಅರ್ಹತೆಗಾಗಿ ನಡೆಯುವ ಮೊದಲ ಸುತ್ತಿನ ಪಂದ್ಯ ಅ.16 ರಿಂದ ಅ.21ರವರೆಗೆ ನಡೆಯಲಿದ್ದು ನಾಲ್ಕು ತಂಡಗಳ ಪೈಕಿ ಎರಡು ತಂಡಗಳು ಸೂಪರ್ 12 ಸುತ್ತಿಗೆ ಅರ್ಹತೆ ಪಡೆದು ಈಗಾಗಲೇ ಅರ್ಹವಾಗಿರುವ ತಂಡಗಳ ಪಟ್ಟಿಗೆ ಸೇರುತ್ತದೆ. ಮೊದಲ ಪಂದ್ಯ ಅ.16 ರಂದು ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಲಿದ್ದು ನಂತರದಲ್ಲಿ ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳು ಸೆಣೆಸಲಿವೆ.
ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ : ಅಕ್ಟೋಬರ್ 23 ರಂದು ಸೆಣೆಸಾಡಲಿದೆ ಭಾರತ-ಪಾಕಿಸ್ತಾನ
Recent Comments
ಕಗ್ಗದ ಸಂದೇಶ
on