ಪುರಸಭೆ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ವೇಳೆ ವಿಪಕ್ಷಗಳ ಅಸಹಕಾ

ಕಾರ್ಕಳ : ಪುರಸಭೆ ಸ್ಥಾಯಿ ಸಮಿತಿ ಅವಧಿ ಮುಗಿದಿರುವುದರಿಂದ ನೂತನ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆಯು ಜ.20 ರಂದು ಜರುಗಿದೆ. ಆಯ್ಕೆ ಪ್ರಕ್ರಿಯೆ ನಿರ್ಣಯ ಮಂಡನೆಯಾಗಿ ಚರ್ಚೆ ಸಂದರ್ಭ ವಿಪಕ್ಷ ಸದಸ್ಯರಿಗೂ ಅವಕಾಶ ನೀಡುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿಗೆ ಹೆಸರು ಸೂಚಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಆದರೆ, ಸಭೆಯಲ್ಲಿ ಹಾಜರಿದ್ದ ವಿಪಕ್ಷ ಸದಸ್ಯರು ಸ್ಥಾಯಿ ಸಮಿತಿಗೆ ಸೇರಲು ಇಚ್ಛಿಸದ ಕಾರಣ ಅನಿವಾರ್ಯವಾಗಿ ಸಭೆಯಲ್ಲಿದ್ದ ಸದಸ್ಯರನ್ನು ನಿಯಮಾನುಸಾರವಾಗಿ ಆಯ್ಕೆ ಮಾಡಲಾಯಿತು. ವಿಪಕ್ಷ ಸದಸ್ಯರು ಕಾರಣವಿಲ್ಲದೇ ಸಾಮಾನ್ಯ ಸಭೆಗೆ ಹಾಜರಾಗದ ನೆಲೆಯಲ್ಲಿ ಹಾಜರಿದ್ದ ಸದಸ್ಯರು ನಿರ್ಣಯವನ್ನು ಉದ್ದೇಶಪೂರ್ವಕವಾಗಿ ಮುಂದೂಡುವ ಪ್ರಯತ್ನ ಮಾಡಿರುತ್ತಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಗೆ ಸ್ಪಂದಿಸದೇ ವಿಪಕ್ಷ ಸದಸ್ಯರು ವ್ಯತಿರಿಕ್ತವಾಗಿ ನಡೆದುಕೊಂಡಿರುತ್ತಾರೆ. ಅವರ ವರ್ತನೆಯು ಪುರಸಭೆಯ ಅಭಿವೃದ್ಧಿಗೆ ವಿರೋಧವಾಗಿ ಎನ್ನುವುದು ಸ್ಪಷ್ಟವಾಗಿದೆ ಎಂದು ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.









































































































































































error: Content is protected !!
Scroll to Top