ಜನಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಶುಕ್ರವಾರ ಮಧ್ಯಾಹ್ನ ಕೋವಿಡ್ ತಜ್ಞರು, ಸಚಿವ ಸಂಪುಟದ ಸಹೋದ್ಯೋಗಿಗಳ ಸಭೆ ಕರೆದಿದ್ದೇನೆ. ಕೇಂದ್ರ ಸಚಿವರು ಕೂಡ ಕೋವಿಡ್ ಸಂಬಂಧ ಹಲವು ಸಲಹೆಗಳನ್ನು ನೀಡಿದ್ದಾರೆ. ತಜ್ಞರು ನೀಡುವ ವರದಿ, ಸಲಹೆ, ಅಭಿಪ್ರಾಯ ಆಧರಿಸಿ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ನಿಯಮ ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯದಲ್ಲಿರುವ ಕೋವಿಡ್ ಸ್ಥಿತಿಗತಿ ಆಧರಿಸಿ, ತಜ್ಞರು ನೀಡುವ ವರದಿ, ಅಭಿಪ್ರಾಯ ಹಾಗೂ ಸಲಹೆಗಳನ್ನು ಆಧರಿಸಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಹಲವು ರಾಜಕೀಯ ನಾಯಕರು, ಕೇಂದ್ರದ ನಾಯಕರು ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರ ಸಮಸ್ಯೆ, ಕಷ್ಟಗಳ ಬಗ್ಗೆ ನಮಗೆ ಅರಿವಿದೆ ಹಾಗಾಗಿ ಜನಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸಿದ್ಧಗಂಗಾ ಶ್ರೀಗಳ ಸ್ಮರಣೆ:
ಇಂದಿಗೆ ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ, ಕರ್ನಾಟಕ ರತ್ನ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಇಹದ ಜೀವನ ಪಯಣ ಮುಗಿದು ಮೂರು ವರ್ಷ ಕಳೆದಿದೆ.
ಈ ಸಂದರ್ಭದಲ್ಲಿ ಶ್ರೀಗಳನ್ನು ಸ್ಮರಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದಗಂಗಾ ಮಠ ದಾಸೋಹದಲ್ಲಿ ಕರ್ನಾಟಕದಲ್ಲಿ ಬಹಳ ದೊಡ್ಡ ಪರಂಪರೆಯನ್ನು ಹುಟ್ಟುಹಾಕಿದೆ. ಜಗಜ್ಯೋತಿ ಬಸವೇಶ್ವರರ ದಾಸೋಹವನ್ನು ಅಕ್ಷರಶಃ ಪಾಲಿಸಲಾಗಿದೆ. ಇವತ್ತಿನ ಜಗದ್ಗುರುಗಳು ಅದನ್ನೇ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸರ್ಕಾರ ಸಿದ್ದಗಂಗಾ ಶ್ರೀಗಳ ಹಾದಿಯಲ್ಲಿ ಸಾಗುತ್ತಿದೆ. ಈ ದೆಸೆಯಲ್ಲಿ ದಾಸೋಹ ಕಾರ್ಯಕ್ರಮವನ್ನು ಸರ್ಕಾರ ಮುಂದುವರಿಸುತ್ತದೆ. ನಾಲ್ಕು ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದುದನ್ನು 5 ಕೆಜಿಗೆ ಹೆಚ್ಚಿಸಿ, ಮಠಗಳಿಗೆ ಅಕ್ಕಿ, ಬೇಳೆ, ರಾಗಿಯನ್ನು ವಿತರಣೆ ಮಾಡುತ್ತಿದ್ದೇವೆ. ವಿದ್ಯಾ ದಾಸೋಹವನ್ನು ಕೂಡ ಮಾಡುವುದರೊಂದಿಗೆ ಕಾರ್ಮಿಕ ಮಕ್ಕಳಿಗೆ, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ವರ್ಷ ವಾಸಕ್ಕೆ ಮನೆಯಿಲ್ಲದವರಿಗೆ 5 ಲಕ್ಷ ಮನೆಗಳನ್ನು ನೀಡುತ್ತಿದ್ದೇವೆ. ಅನ್ನದಾಸೋಹ, ಆಶ್ರಯ ದಾಸೋಹ, ಅಕ್ಷರ ದಾಸೋಹವನ್ನು ಸರ್ಕಾರ ಮುಂದುವರಿಸುತ್ತಿದೆ. ಇಂದು ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಕ್ಕಳ ಜೊತೆಗೆ ಸಮಯವನ್ನು ಸ್ವಲ್ಪ ಹೊತ್ತು ಕಳೆಯುತ್ತೇನೆ ಎಂದರು.









































































































































































error: Content is protected !!
Scroll to Top