ಬೆಂಗಳೂರು : ಯುವ ಕಾಂಗ್ರೆಸ್ ಮುಖಂಡ ನಲಪಾಡ್ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
ನಲಪಾಡ್ ವಿರುದ್ಧ ಹಲ್ಲೆ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಯಾವ ಗಲಾಟೆಯೂ ನಡೆದಿಲ್ಲ ನಾನು ಕ್ರಾಸ್ ಚೆಕ್ ಮಾಡಿದ್ದೇನೆ, ಯಾರೋ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ನಾನು ಸಿದ್ದು ಹಳ್ಳೇಗೌಡ ಜೊತೆ ಫೋನ್ನಲ್ಲಿ ಮಾತನಾಡಿದೆ. ನನ್ನ ಪೋನ್ ತಗೊಂಡು ಯಾರೋ ಈ ರೀತಿ ಮಾಡಿದ್ದಾರೆ ಅಂತ ಅವರು ಹೇಳಿದ್ದಾರೆ ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.
ಕೆಲಸ ಮಾಡ್ತಾ ಇದ್ದಾರೆ ಅಂದ್ರೆ ಅವರ ವಿರುದ್ಧ ಈ ರೀತಿ ಏನೋ ಒಂದ್ ಕೇಳಿ ಬರುವುದು ಸಹಜ. ನಾನು ಯಾರ ವೈಯಕ್ತಿಕ ಜೀವನಕ್ಕೆ ಎಂಟ್ರಿ ಕೊಡುವುದಕ್ಕೆ ಆಗುವುದಿಲ್ಲ. ಪಕ್ಷದಲ್ಲಿ ಯಾರೇ ತಪ್ಪು ಮಾಡಿದ್ರೂ ಶಿಸ್ತಿನ ಕ್ರಮ ತೆಗೆದುಕೊಳ್ತೀವಿ ಎಂದು ಹೇಳಿದರು.
ರಾಜ್ಯ ಸರಕಾರಕ್ಕೆ ಕೋವಿಡ್ ವಿಚಾರದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರ ಜನರನ್ನು ಸಾಯಿಸುತ್ತಿದೆ ಎಂದು ಆರೋಪಿಸಿದರು
ಯಾವ ಗಲಾಟೆಯೂ ನಡೆದಿಲ್ಲ: ಡಿಕೆಶಿ
