Saturday, May 21, 2022
spot_img
Homeಸುದ್ದಿಕಾರ್ಕಳ : ತಾಲೂಕು ಪಂಚಾಯತ್‌ ನಲ್ಲಿ ಆರ್ಥಿಕ ಸಾಕ್ಷರತಾ ಗೋಷ್ಠಿ

ಕಾರ್ಕಳ : ತಾಲೂಕು ಪಂಚಾಯತ್‌ ನಲ್ಲಿ ಆರ್ಥಿಕ ಸಾಕ್ಷರತಾ ಗೋಷ್ಠಿ

ಕಾರ್ಕಳ : ಆರ್.ಬಿ.ಐ. ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗ ಬೆಂಗಳೂರು, ಲೀಡ್‌ ಬ್ಯಾಂಕ್‌ ಕಚೇರಿ, ಕೆನರಾ ಬ್ಯಾಂಕ್‌ ಉಡುಪಿ, ಆರ್ಥಿಕ ಸಾಕ್ಷರತಾ ಕೇಂದ್ರ ಕಾರ್ಕಳ, ರುಡ್‌ ಸೆಟ್‌ ಸಂಸ್ಥೆ ಬ್ರಹ್ಮಾವರ ಇವರ ಸಹಯೋಗದಲ್ಲಿ ಸ್ವಸಹಾಯ ಸಂಘಗಳಿಗೆ ಹಣಕಾಸು ಸಾಕ್ಷರತಾ ಕಾರ್ಯಕ್ರಮವು ತಾಲೂಕು ಪಂಚಾಯತ್‌ ನಲ್ಲಿ ಜ. 19ರಂದು ಜರುಗಿತು. ಕಾರ್ಕಳ ಕೆನರಾ ಬ್ಯಾಂಕ್‌ ಸಹಾಯಕ ಪ್ರಭಂದಕ ಉಮೇಶ್‌ ಶೆಣೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ವ ಸಹಾಯ ಸಂಘಗಳಿಗೆ ಹಣಕಾಸು ಸಾಕ್ಷರತೆಯ ಬಗ್ಗೆ ಗೋಷ್ಠಿ ನಡೆಸಲಾಯಿತು. ಉಡುಪಿ ಲೀಡ್‌ ಬ್ಯಾಂಕ್‌ ಮುಖ್ಯ ಪ್ರಭಂದಕ ಪಿ.ಎಂ. ಪಿಜರ್‌, ಆರ್ಥಿಕ ಸಾಕ್ಷರತಾ ಕೇಂದ್ರದ ಪ್ರದೀಪ್‌ ಕೆ., ರುಡ್‌ ಸೆಟ್‌ ಸಂಸ್ಥೆಯ ಕೆ. ಕರುಣಾಕರ ಜೈನ್‌ ಉಪಸ್ಥಿತರಿದ್ದರು. ಕುಮಾರಿ ನಿಧಿ ಪ್ರಾರ್ಥಿಸಿ, ಕುಮಾರಿ ಸುಜಾತ ಸ್ವಾಗತಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿ, ಸುಜಯಾ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!