ಕಾರ್ಕಳ : ನಿಲ್ಲಿಸಿದ್ದ ಬೈಕ್ ಕಳುವಾದ ಘಟನೆ ಕಾರ್ಕಳ ಕಸಬಾ ಗ್ರಾಮದ ಸಾಲ್ಮರ ಎಂಬಲ್ಲಿ ಜ. 17ರಂದು ನಡೆದಿದೆ. ಸಾಲ್ಮರದ ಅಂಗಡಿಯೊಂದರಲ್ಲಿ ಎ.ಸಿ. ಮೆಕ್ಯಾನಿಕ್ ಆಗಿರುವ ಮಹಮ್ಮದ್ ರಮೀಝ್ ಜ. 17 ರಂದು ಮಧ್ಯಾಹ್ನ ಯಮಹಾ (FZ ಬೈಕ್ KA-20-EP-1035) ಬೈಕ್ ಅನ್ನು ಅಂಗಡಿ ಮುಂಭಾಗ ಬೈಕ್ ನಿಲ್ಲಿಸಿ, ಹ್ಯಾಂಡ್ ಲಾಕ್ ಮಾಡಿ ಮಂಗಳೂರಿಗೆ ತೆರಳಿದ್ದರು. ಮರುದಿನ ಬಂದು ನೋಡಿದಾಗ ಬೈಕ್ ಕಳುವಾಗಿರುವುದು ಬೆಳಕಿಗೆ ಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on