Saturday, May 21, 2022
spot_img
Homeರಾಜ್ಯಗಂಗಾ ಕಲ್ಯಾಣ ಯೋಜನೆ ಅರ್ಜಿ : 30 ದಿನದಲ್ಲಿ ವಿದ್ಯುತ್ ಸಂಪರ್ಕ ಸಚಿವ ವಿ. ಸುನಿಲ್‌...

ಗಂಗಾ ಕಲ್ಯಾಣ ಯೋಜನೆ ಅರ್ಜಿ : 30 ದಿನದಲ್ಲಿ ವಿದ್ಯುತ್ ಸಂಪರ್ಕ ಸಚಿವ ವಿ. ಸುನಿಲ್‌ ಕುಮಾರ್

ಬೆಂಗಳೂರು: ಠೇವಣಿ ಹಣ ಜಮಾಯಾದ 30 ದಿನದೊಳಗಾಗಿ ಗಂಗಾ ಕಲ್ಯಾಣ ಯೋಜನೆಯ ಅರ್ಜಿಗೆ ವಿದ್ಯುದ್ಧೀಕರಣ ಸಂಪರ್ಕ ಕಲ್ಪಿಸುವಂತೆ ಹಾಗೂ ಯೋಜನೆಯ ಸಂಪರ್ಕ ಹಾಗೂ ವಿದ್ಯುದ್ಧೀಕರಣದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗ ಬಾರದು ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್ ಸೂಚನೆ ನೀಡಿದ್ದಾರೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಬಾಬು ಜಗಜೀವನ್ ರಾರಿ ಅಭಿವೃದ್ಧಿ ನಿಗಮ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯಿಂದ ಧನಸಹಾಯ ಮಾಡಲಾಗುತ್ತದೆ ಎಂದರು. ಐದೂ ವಿದ್ಯುತ್ ಪ್ರಸರಣ ಕಂಪನಿ ವ್ಯಾಪ್ತಿಯಲ್ಲಿ ಈವರೆಗೆ ದಾಖಲಾದ 8377 ಅರ್ಜಿಗಳ ಪೈಕಿ 5982ಕ್ಕೆ 30 ದಿನಗಳ ಅವಧಿಯಲ್ಲಿ ಸಂಪರ್ಕ ಕಲ್ಪಿಸಲಾಗಿದೆ. 2365 ಅರ್ಜಿಗಳು ಸಂಪರ್ಕಕ್ಕೆ ಬಾಕಿ ಇವೆ. ಈ ಪೈಕಿ 1020 ಅರ್ಜಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಮುಂಗಾರು, ವ್ಯಾಜ್ಯ, ಸಾರಿಗೆ ನಿರ್ಬಂಧ ಇತ್ಯಾದಿ ಕಾರಣಗಳಿಂದ 962 ಅರ್ಜಿಗಳ ವಿಲೇವಾರಿಗೆ ಅಡ್ಡಿ ಇದ್ದು ಆದಷ್ಟು ಶೀಘ್ರ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವ ಸುನೀಲ್‌ ಕುಮಾರ್‌ ತಿಳಿಸಿದರು. ಅರ್ಜಿದಾರರು ಕೊಳವೆಬಾವಿ ಕೊರೆಸಿದ ಬಳಿಕ ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪನಿ ಈಗಾಗಲೇ ದಾಖಲಿಸಿರುವ ಅರ್ಜಿಯ ಜೊತೆಗೆ ಸರಕಾರ ನಿದಿಪಡಿಸಿರುವ 50 ಸಾವಿರ ರೂ. ಠೇವಣಿ ಸಂದಾಯ ಮಾಡಬೇಕಾಗುತ್ತದೆ ಇದಾದ 30 ದಿನದೊಳಗೆ ವಿದ್ಯುದೀಕರಣ ವ್ಯವಸ್ಥೆ ಕಲ್ಪಿಸಬೇಕೆಂದು ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!