Saturday, May 21, 2022
spot_img
Homeಸುದ್ದಿಬೈಂದೂರಿನಲ್ಲಿ ಸಹಕಾರ ಭಾರತಿ ಸ್ಥಾಪನ ದಿನಾಚರಣೆ

ಬೈಂದೂರಿನಲ್ಲಿ ಸಹಕಾರ ಭಾರತಿ ಸ್ಥಾಪನ ದಿನಾಚರಣೆ

ಸಹಕಾರ ಭಾರತಿ ಬೈಂದೂರು ತಾಲೂಕಿನಲ್ಲಿ. ಸಹಕಾರ ಭಾರತಿ ಸ್ಥಾಪನ ದಿನಾಚರಣೆಯನ್ನು ನಾಗೂರಿನ ಲಲಿತಾ ಕೃಷ್ಣ ಸಭಾ ಭವನದಲ್ಲಿ ಆಚರಿಸಲಾಯಿತು. ಸಹಕಾರ ಭಾರತಿ ಸಂಸ್ಥೆಗಳು ಹಲವಾರು ಉದ್ದೇಶಗಳಿಗಾಗಿ ಕೆಲಸ ಮಾಡುತ್ತಾ ಸಮಾಜದ ಉನ್ನತಿಗೆ ಶ್ರಮಿಸುತ್ತಿವೆ. ಸಹಕಾರ ಭಾರತಿ ಸಂಘಟನಾತ್ಮಕವಾಗಿ ಕೆಲಸ ಮಾಡುವ ಮೂಲಕ ಎಲ್ಲಾ ಸಹಕಾರಿ ಸಂಘಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಭಾರತಿ ಅಧ್ಯಕ್ಷ ಅಶೋಕ್‌ ವಿ. ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜುನಾಥ್, ಮೋಹನ್ ಕುಂಬ್ಳೆಕರ್, ವಿಜೇತ ಪೈ, ಪ್ರಸಾದ್ ಶೆಟ್ಟಿ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಹಿತಿ ಹಾಗೂ ಸಹಕಾರಿ ಧುರೀಣ ಕೆ. ಪುಂಡಲೀಕ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಆನಂದ್ ಖಾರ್ವಿ ಸ್ವಾಗತಿಸಿ, ರಮೇಶ್ ಪೈ ಧನ್ಯವಾದ ಸಮರ್ಪಿಸಿದರು. ಉಮೇಶ್ ಬಿಜೂರ್ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಮಂಜು ದೇವಾಡಿಗ ಬಿಜೂರ್. ವೆಂಕಟೇಶ್ ಹೆಬ್ಬಾರ್, ದೀಪಕ್ ಕುಮಾರ್ ಶೆಟ್ಟಿ ಮತ್ತು ಬಿಜೆಪಿ ಮಂಡಲ ಅಧ್ಯಕ್ಷರು, ಪಕ್ಷದ ಪ್ರಮುಖರು ಹಾಜರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!