Saturday, May 21, 2022
spot_img
Homeಸುದ್ದಿಪೆರೇಡ್ ವಿಚಾರವಾಗಿ ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಸೃಸ್ಟಿಸುತ್ತಿರುವುದು ಸರಿಯಲ್ಲ

ಪೆರೇಡ್ ವಿಚಾರವಾಗಿ ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಸೃಸ್ಟಿಸುತ್ತಿರುವುದು ಸರಿಯಲ್ಲ

ಕಾರ್ಕಳ : ಗಣರಾಜ್ಯೋತ್ಸವ ಪರೇಡ್ ವಿಚಾರವಾಗಿ ಶ್ರೀ ನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಸೃಸ್ಟಿಸುತ್ತಿರುವುದು ಸರಿಯಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದಿನಿಂದಲೂ ನಡೆದುಬಂದ ಪದ್ಧತಿಯಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಗಣರಾಜ್ಯೋತ್ಸವ ಪೆರೇಡ್ ಗೆ ಸ್ತಬ್ಧಚಿತ್ರಗಳನ್ನು ಕಳುಹಿಸುವುದು ರೂಢಿ. ಆದರೆ, ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ಗೆ ಕೇವಲ 12 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಪರಿಗಣಿಸಲಾಗುತ್ತಿದೆ. ಅಂದರೆ 3 ವರ್ಷಕ್ಕೊಮ್ಮೆ ಪ್ರತಿ ರಾಜ್ಯಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ.
36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಇರುವ ನಮ್ಮ ದೇಶದಲ್ಲಿ ಪ್ರತಿ ರಾಜ್ಯವೂ ಪ್ರತಿವರ್ಷ ಪೆರೇಡ್ ನಲ್ಲಿ ಭಾಗವಹಿಸುವ ಅವಕಾಶವಿರುವುದಿಲ್ಲ. ಇದು ನಮ್ಮ ದೇಶದಲ್ಲಿ ಗಣರಾಜ್ಯೋತ್ಸವ ಆರಂಭವಾದಾಗಿನಿಂದ ನಡೆದುಬಂದ ಸತ್ಸಂಪ್ರದಾಯ ಮತ್ತು ನಿಯಾಮವಳಿ. ಈ ಸಂಪ್ರದಾಯದಂತೆ 2018 ಮತ್ತು 2021ರಲ್ಲಿ ಕೇರಳ ರಾಜ್ಯವು ತನ್ನ ಸ್ತಬ್ಧಚಿತ್ರಗಳೊಂದಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿತ್ತು.
ಈ ಪುನರಾವರ್ತಿತ ನಿಯಮದಂತೆ ಕಳೆದ ವರ್ಷಗಳಲ್ಲಿ ಭಾಗವಹಿಸಿದ ರಾಜ್ಯಗಳನ್ನು ಬಿಟ್ಟು ಉಳಿದ 12 ರಾಜ್ಯಗಳಲ್ಲಿ ಈ ವರ್ಷ ಭಾಗವಹಿಸುವ ಅವಕಾಶವಿರುತ್ತದೆ ವಿನಃ ಕಳೆದ ವರ್ಷ ಅಂದರೆ 2021ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿರುವ ಕೇರಳ ರಾಜ್ಯಕ್ಕೆ ಈ ವರ್ಷ ನಿಯಾಮವಳಿಯಂತೆ ಅವಕಾಶವಿರುವುದಿಲ್ಲ. ಈ ನಿಯಮಾವಳಿ ತಿಳಿದಿದ್ದರೂ ಕೂಡ ಕೇರಳ ರಾಜ್ಯವು ನಾರಾಯಣ ಗುರುಗಳ ವಿಚಾರವನ್ನು ಮುಂದಿಟ್ಟುಕೊಂಡು ಅನಾವಶ್ಯಕ ವಿವಾದ ಹುಟ್ಟು ಹಾಕುತ್ತಿದೆ.
2021ರಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದ ಕೇರಳ ರಾಜ್ಯಕ್ಕೆ ಇನ್ನೂ ಮೂರು ವರ್ಷ ಬಿಟ್ಟು ಅಂದರೆ 2024ರಲ್ಲಿ ನಿಯಮಾವಳಿ ಪ್ರಕಾರ ಮತ್ತೊಮ್ಮೆ ಅವಕಾಶ ಎಂಬುದಾಗಿ ತಿಳಿದಿದ್ದರೂ ಕೂಡ ಕೇರಳ ಸರ್ಕಾರ ಈ ವರ್ಷವು ಭಾಗವಹಿಸುವ ಅವಕಾಶ ಕೋರಿದೆ. ಸಂಪ್ರದಾಯ ನಿಯಮಾವಳಿಯಂತೆ ಕೇಂದ್ರ ಸರ್ಕಾರ ಈ ವರ್ಷ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ.
ಈ ಎಲ್ಲಾ ನಿಯಮಾವಳಿಗಳು ಗೊತ್ತಿರುವ ಕೇರಳ ರಾಜ್ಯವು ಶ್ರೀ ನಾರಾಯಣ ಗುರುಗಳ ವಿಚಾರವನ್ನು ಎಳೆದು ತಂದು ವಿವಾದವನ್ನು ಹುಟ್ಟು ಹಾಕುತ್ತಿರುವುದು ಶೋಭೆ ತರುವಂತದ್ದಲ್ಲ. ಕಮ್ಯುನಿಸ್ಟ್ ನಿಲುವು ಹೊಂದಿರುವ ಕೇರಳ ಸರಕಾರವು ಹಿಂದೂ ವಿರೋಧಿ ನೀತಿಗಳಿಂದ ಕುಖ್ಯಾತಿ ಪಡೆದಿದೆ. ಕಮ್ಯುನಿಸ್ಟರಿಂದ ಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ನಾವು ಕಲಿಯಬೇಕಾಗಿಲ್ಲ. ನಾರಾಯಣ ಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು ಹಾಗೂ ಪೂಜ್ಯಾನೀಯರು. ಆರಂಭದಿಂದಲೂ ನಡೆದು ಬಂದಿರುವ ಸಂಪ್ರದಾಯ ಮತ್ತು ನಿಯಾಮವಳಿಯನ್ನು ತಿಳಿದುಕೊಂಡು ಕೇರಳ ಸರ್ಕಾರವು ವಿವಾದ ಮಾಡದೇ ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕೆಂದು ಈ ಮೂಲಕ ಕೇರಳ ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಸುನಿಲ್‌ ಕುಮಾರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!