Wednesday, January 26, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ಲಿಫ್ಟ್ ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿಕೊಂಡ ಮಹಿಳೆ

ಕಾರ್ಕಳ : ಲಿಫ್ಟ್ ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿಕೊಂಡ ಮಹಿಳೆ

ಕಾರ್ಕಳ : ಅಪಾರ್ಟ್ಮೆಂಟ್ ನ ಲಿಫ್ಟ್‌ ಮೇಲೆರುವ ಸಂದರ್ಭ ಕೆಟ್ಟು ನಿಂತ ಪರಿಣಾಮ ಮಹಿಳೆಯೋರ್ವರು ಲಿಫ್ಟ್‌ನಲ್ಲಿ ಸಿಲುಕಿಕೊಂಡ ಘಟನೆ ಜ. 12ರಂದು ಕಾರ್ಕಳದಲ್ಲಿ ನಡೆದಿದೆ. ಕಾರ್ಕಳ ಪೆರ್ವಾಜೆಯ ಸುವಿಧಾ ಅಪಾರ್ಟ್‌ಮೆಂಟ್‌ನಲ್ಲಿ ಅದೇ ಅಪಾರ್ಟ್ ಮೆಂಟ್‌ ನ ನಿವಾಸಿ ಸುಮನ ಆಚಾರ್ಯ (40) ಅವರು ಬೆಳಿಗ್ಗೆ 9ಗಂಟೆಗೆ ಮೂರನೇ ಮಹಡಿಯಲ್ಲಿರುವ ತನ್ನ ಮನೆಗೆ ಹೋಗುವ ಸಮಯ ಲಿಫ್ಟ್ ಅರ್ಧದಲ್ಲಿಯೇ ನಿಂತಿದ್ದು ಲಿಪ್ಟ್‌ ನ ತುರ್ತು ಗಂಟೆ ಒತ್ತಿದಾಗ ಪರಿಚಯದ ದಿಶಾ ಮತ್ತು ಆಕೃತಿ ಬಟ್ಟೆ ಅಂಗಡಿಯವರು ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾ‍ಧ್ಯವಾಗಿರಲಿಲ್ಲ.
ಹಾಗಾಗಿ 4 ನೇ ಮಹಡಿಯ ಯುವಕನೊಬ್ಬ ಬಂದು ಅಪಾರ್ಟ್‌ಮೆಂಟ್‌ನ ಅಧ್ಯಕ್ಷ ಮಹೇಶ ಎಂಬಾವರಿಗೆ ಫೋನ್ ಮಾಡಿ ಬಾಗಿಲು ತೆರೆಯಲು ತಿಳಿಸಿದ್ದರು. ಮಹೇಶ ಅವರು ಬಾರದ ಕಾರಣ ಯುವಕ ಮತ್ತು ಆಕೃತಿ ಬಟ್ಟೆ ಅಂಗಡಿಯವರು ಸೇರಿ ಬಾಗಿಲು ತೆರೆದಿರುತ್ತಾರೆ. ಅರ್ಧ ಗಂಟೆ ಬಳಿಕ ಹೊರಬಂದಿರುತ್ತೇನೆ ಎಂದು ಸುಮನ ತಿಳಿಸಿದ್ದಾರೆ.

ಹಲ್ಲೆ ದೂರು
ಅಪಾರ್ಟ್‌ ಮೆಂಟ್‌ ಅಧ್ಯಕ್ಷ ಮಹೇಶ ಮತ್ತು ಆತನ ಪತ್ನಿ ರಶ್ಮಿ ಲಿಫ್ಟ್ ಹತ್ತಿರ ಬಂದು ಲಿಪ್ಟ್ ಬಾಗಿಲು ತೆರೆಯಲು ನಿಮಗೆ ಯಾರು ಅನುಮತಿ ನೀಡಿದ್ದು ? ಸಿಕ್ಕಿಕೊಂಡವರು ಬೇಕಾದರೆ ಸಾಯಲಿ ಎಂದು ಹೇಳಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬೈದು ಮಹೇಶ ಹಲ್ಲೆ ಮಾಡಿರುತ್ತಾರೆ. ಹೀಗಾಗಿ ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸುಮನ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!