Wednesday, January 26, 2022
spot_img
Homeಸ್ಥಳೀಯ ಸುದ್ದಿಕ್ರಿಯೇಟಿವ್‌ ಕಾಲೇಜಿನಲ್ಲಿ ವಿವೇಕಾನಂದ ಜನ್ಮದಿನ ಆಚರಣೆ

ಕ್ರಿಯೇಟಿವ್‌ ಕಾಲೇಜಿನಲ್ಲಿ ವಿವೇಕಾನಂದ ಜನ್ಮದಿನ ಆಚರಣೆ

ಕಾರ್ಕಳ : ವಿಶ್ವಕ್ಕೆ ಭಾರತೀಯತೆ ಮತ್ತು ಸನಾತನ ಧರ್ಮದ ಹಿರಿಮೆ ತೋರಿಸಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದ. ಪಾಶ್ಚಾತ್ಯ ವಿಚಾರಧಾರೆಗಳ ಕಡೆಗೆ ಸಾಗುತ್ತಿದ್ದ ಸಂದರ್ಭ ಭಾರತದ ಮೌಲ್ಯ ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವ ವಿವೇಕಾನಂದರ ಕೊಡುಗೆ ಅನನ್ಯವಾದುದು ಎಂದು ಉಪನ್ಯಾಸಕ ವಿನಾಯಕ್‌ ಜೋಗ್‌ ಹೇಳಿದರು.

ಅವರು ಜ. 12ರಂದು ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಜ. 13ರಂದು ಸ್ವಾಮಿ ವಿವೇಕಾನಂದರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ‘ಏಳಿ ಎದ್ದೇಳಿ ನಿಲ್ಲದಿರಿ. ಗುರಿಮುಟ್ಟುವ ತನಕ’ ಎಂಬ ವಾಣಿ ನಮಗೆಲ್ಲರಿಗೂ ಸ್ಫೂರ್ತಿಯೆಂದರು.
ಹಾಸನದ ಹೆಚ್.ಕೆ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಮಲ್ ರಾಜ್, ಉಪನ್ಯಾಸಕ ಉಮೇಶ್, ವಿಘ್ನೇಶ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಅನಘ ಸ್ವಾಗತಿಸಿ, ಕುಮಾರಿ ವಿಂದ್ಯಾ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಅಮರ್ ವಂದಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!