Wednesday, January 26, 2022
spot_img
Homeಸ್ಥಳೀಯ ಸುದ್ದಿಕ್ರೈಸ್ಟ್‌ ಕಿಂಗ್‌ : ರಾಷ್ಟ್ರೀಯ ಯುವದಿನ ಆಚರಣೆ

ಕ್ರೈಸ್ಟ್‌ ಕಿಂಗ್‌ : ರಾಷ್ಟ್ರೀಯ ಯುವದಿನ ಆಚರಣೆ

ಕಾರ್ಕಳ : ಇಲ್ಲಿನ ಕ್ರೈಸ್ಟ್‌ ಕಿಂಗ್‌ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಜ. 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂಗವಾಗಿ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಜೆಸಿಐ ಕುಂದಾಪುರ ವಿಭಾಗದ ತರಬೇತುದಾರ ಸದಾನಂದ ನಾವಡ ಮಾತನಾಡಿ, ಸ್ವಾಮಿ ವಿವೇಕಾನಂದರ ಬದುಕು ನಮಗೆಲ್ಲರಿಗೂ ಆದರ್ಶ. ಅವರ ಬೋಧನೆಯನ್ನು ಅನುಸರಿಸಿಕೊಂಡು ಸಮಾಜದ ಉನ್ನತಿಗಾಗಿ ನಮ್ಮ ಜೀವನ ಸಮರ್ಪಿಸಿಕೊಳ್ಳಬೇಕೆಂದರು. ಸಂಸ್ಥೆಯ ಮುಖ್ಯ ಶಿಕ್ಷಕ ಮೇರಿಯನ್ ಡಿ’ಸೋಜಾ, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್‍ ಅಂದ್ರಾದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷತೊಟ್ಟು ಗಮನ ಸೆಳೆದರು. ವಿದ್ಯಾರ್ಥಿಗಳಾದ ಸುಧೀಕ್ಷಾ ಸ್ವಾಗತಿಸಿ, ಸ್ಲೀಟಾ ಕಾರ್ಯಕ್ರಮ ನಿರೂಪಿಸಿದರು, ಅನುಷ್ಕಾ ವಂದಿಸಿದರು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!