Wednesday, January 26, 2022
spot_img
Homeದೇಶಮುಂಬೈ ನಲ್ಲಿ ಶೀಘ್ರವೇ ವಾಟರ್ ಟ್ಯಾಕ್ಸಿ ಸೇವೆ ಕಾರ್ಯಾರಂಭ

ಮುಂಬೈ ನಲ್ಲಿ ಶೀಘ್ರವೇ ವಾಟರ್ ಟ್ಯಾಕ್ಸಿ ಸೇವೆ ಕಾರ್ಯಾರಂಭ

ಮುಂಬೈ: ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಲಿದೆ. ದಕ್ಷಿಣ ಮುಂಬೈಯಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ವಾಟರ್ ಟ್ಯಾಕ್ಸಿ ಸೇವೆ ಜನವರಿ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆ.ಎನ್‌.ಪಿ.ಟಿ.ಗೆ ದಕ್ಷಿಣ ಮುಂಬೈನ ಮಜಗಾನ್‌ನಲ್ಲಿರುವ ಕ್ರೂಸರ್ ಟರ್ಮಿನಲ್‌ನೊಂದಿಗೆ ಸಂಪರ್ಕವನ್ನು ವಾಟರ್ ಟ್ಯಾಕ್ಸಿಗಳು ಕಲ್ಪಿಸಲಿದ್ದು, ಪ್ರಯಾಣಿಕರಿಗೆ ಸುಮಾರು 25 ನಿಮಿಷ ಉಳಿತಾಯವಾಗಲಿದೆ ವಾಟರ್ ಟ್ಯಾಕ್ಸಿಯಲ್ಲಿ ಏಕಮುಖ ಪ್ರಯಾಣದ ವೆಚ್ಚ ರೂ. 200 ರಿಂದ ರೂ. 700 ರ ನಡುವೆ ಇರಲಿದೆ. ಇದಲ್ಲದೇ ಮಾಸಿಕ ಪಾಸ್‌ಗಳ ವ್ಯವಸ್ಥೆಯು ಇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳಾಂತ್ಯದೊಳಗೆ ವಾಟರ್ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಲಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!