Wednesday, January 26, 2022
spot_img
Homeದೇಶವ್ಯಾಕ್ಸಿನ್‌ : ವಾರದೊಳಗೆ 2 ಕೋಟಿ ಲಸಿಕೆ; ಯುವಜನತೆ ಉತ್ಸಾಹಕ್ಕೆ ಮೆಚ್ಚುಗೆ

ವ್ಯಾಕ್ಸಿನ್‌ : ವಾರದೊಳಗೆ 2 ಕೋಟಿ ಲಸಿಕೆ; ಯುವಜನತೆ ಉತ್ಸಾಹಕ್ಕೆ ಮೆಚ್ಚುಗೆ


ನವದೆಹಲಿ (ಜ. 8): 15-18 ವರ್ಷ ವಯಸ್ಸಿನ 2 ಕೋಟಿಗೂ (Covid Vaccine For Teenagers) ಹೆಚ್ಚು ಹದಿಹರೆಯದವರು ತಮ್ಮ ಮೊದಲ ಡೋಸ್ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ. ಮಕ್ಕಳಿಗಾಗಿ ಲಸಿಕೆ ವಿತರಣೆಯನ್ನು ಪ್ರಾರಂಭಿಸಿ ಒಂದು ವಾರದೊಳಗೆ 2 ಕೋಟಿ ಯುವಜನತೆ ಪಡೆದು ಮೈಲಿಗಲ್ಲು ಸೃಷ್ಟಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಲಸಿಕೆ ಪಡೆಯುವಲ್ಲಿ ಯುವಜನತೆ ಉತ್ಸಾಹಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಕೋವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಮತ್ತಷ್ಟು ಬಲಪಡಿಸಿದ್ದಕ್ಕಾಗಿ ಯುವ ಭಾರತಕ್ಕೆ ವಂದನೆಗಳನ್ನು ಸಲ್ಲಿಸಿದ್ದಾರೆ. ಇತ್ತೀಚೆಗೆ 150 ಕೋಟಿ ಮೈಲಿಗಲ್ಲನ್ನು ದಾಟಿದ ಹಿನ್ನಲೆ ಮಾತನಾಡಿದ ಪ್ರಧಾನಿ, ನಮ್ಮ ಕೋವಿಡ್ ಲಸಿಕೆ ವಿತರಣೆ ಅನೇಕ ಜೀವಗಳನ್ನು ಉಳಿಸಲಾಗಿದೆ, ಅದೇ ಸಮಯದಲ್ಲಿ, ನಾವು ಎಲ್ಲಾ ಕೋವಿಡ್-19 ಸಂಬಂಧಿತ ಪ್ರೋಟೋಕಾಲ್‌ಗಳನ್ನು ಸಹ ಅನುಸರಿಸೋಣ. ನಮ್ಮ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಎಲ್ಲರಿಗೂ ಭಾರತ ಕೃತಜ್ಞವಾಗಿದೆ. ಜನರಿಗೆ ಲಸಿಕೆ ಹಾಕುತ್ತಿರುವ ವೈದ್ಯರು, ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಎಲ್ಲಾ ಅರ್ಹರು ತಮ್ಮ ಲಸಿಕೆ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ. ಒಟ್ಟಾಗಿ, ಕೋವಿಡ್-19 ವಿರುದ್ಧ ಹೋರಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!