Wednesday, January 26, 2022
spot_img
Homeವಿದೇಶಅಫ್ಘಾನ್ ಸೇನೆಗೆ ಆತ್ಮಾಹುತಿ ಬಾಂಬರ್‌ಗಳನ್ನು ಸೇರಿಸಲು ತಾಲಿಬಾನ್‍ ನಿರ್ಧಾರ

ಅಫ್ಘಾನ್ ಸೇನೆಗೆ ಆತ್ಮಾಹುತಿ ಬಾಂಬರ್‌ಗಳನ್ನು ಸೇರಿಸಲು ತಾಲಿಬಾನ್‍ ನಿರ್ಧಾರ

ಕಾಬೂಲ್: ನಾಲ್ಕು ತಿಂಗಳ ಹಿಂದೆಯಷ್ಟೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿದ ತಾಲಿಬಾನ್ ಉಗ್ರಗಾಮಿ ಸಂಘಟನೆ ಈಗ ತನ್ನ ಸೇನೆಯನ್ನು ವಿಸ್ತರಿಸಲು ನಿರ್ಧರಿಸಿದೆ.

ಪ್ರತಿಸ್ಪರ್ಧಿ ಇಸ್ಲಾಮಿಕ್ ಸ್ಟೇಟ್‍ನಿಂದ ಬರುವ ಭದ್ರತಾ ಬೆದರಿಕೆಯನ್ನು ತಡೆಯುವುದಕ್ಕಾಗಿ, ತಾಲಿಬಾನ್ ಅಧಿಕೃತವಾಗಿ ಆತ್ಮಹುತಿ ಬಾಂಬರ್‌ಗಳನ್ನು ಅಫ್ಘಾನಿಸ್ತಾನ ಸೇನೆಯಲ್ಲಿ ನೇಮಿಸಿಕೊಳ್ಳಲು ನಿರ್ಧರಿಸಿದೆ.

ಕಳೆದ ವರ್ಷ ಅಧಿಕಾರಕ್ಕೆ ಬರುವ ಮೊದಲು, ತಾಲಿಬಾನ್ 20 ವರ್ಷಗಳ ಯುದ್ಧದಲ್ಲಿ ಯುಎಸ್ ಮತ್ತು ಅಫ್ಘಾನ್ ಪಡೆಗಳ ಮೇಲೆ ದಾಳಿ ಮಾಡಲು ಮತ್ತು ಸೋಲಿಸಲು ಆತ್ಮಹುತಿ ಬಾಂಬರ್‍ ಗಳನ್ನು ಪ್ರಮುಖ ಅಸ್ತ್ರವಾಗಿ ಬಳಸಿತ್ತು. ಈಗ ತಾಲಿಬಾನ್ ಒಂದೇ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಅಫ್ಘಾನಿಸ್ತಾನವನ್ನು ರಕ್ಷಿಸಲು ದೇಶಾದ್ಯಂತ ಆತ್ಮಹತ್ಯಾ ಬಾಂಬರ್‍ ಗಳ ಚದುರಿದ ಸ್ಕ್ವಾಡ್‍ಗಳನ್ನು ಸುಧಾರಿಸಲು ಮತ್ತು ಸಂಘಟಿಸಲು ಬಯಸಿದೆ ಎಂದು ತಾಲಿಬಾನ್‍ ಉಪ ವಕ್ತಾರ ಬಿಲಾಲ್ ಕರಿಮಿ ಹೇಳಿದ್ದಾರೆ.

ಆಗಸ್ಟ್ ನಲ್ಲಿ ಅಮೆರಿಕ ಸರ್ಕಾರವು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳಲು ಕನಿಷ್ಠ ಐದು ಪ್ರಮುಖ ದಾಳಿಗಳನ್ನು ನಡೆಸಿದ್ದು, ಅವುಗಳಲ್ಲಿ ಹಲವು ದಾಳಿಗಳನ್ನು ಆತ್ಮಹುತಿ ಬಾಂಬರ್‍ ಗಳು ನಡೆಸಿದ್ದರು.

ಉಗ್ರಗಾಮಿ ಗುಂಪು ರಾಷ್ಟ್ರವ್ಯಾಪಿ ಮತ್ತು ಗಡಿಯಲ್ಲಿ ಆತ್ಮಹುತಿ ಬಾಂಬರ್ ಗಳು ಕಾರ್ಯತಂತ್ರದ ಅವಿಭಾಜ್ಯ ಅಂಗವಾಗುವುದರೊಂದಿಗೆ ರಕ್ಷಣೆಯನ್ನು ಹೆಚ್ಚಿಸಲು ಬಲವಾದ ಮತ್ತು ಸಂಘಟಿತ ಸೈನ್ಯವನ್ನು ನಿರ್ಮಿಸುತ್ತಿದೆ. ಹಾಗಾಗಿ ಸುಮಾರು 1,50,000 ಯೋಧರನ್ನು ಸೇನೆಗೆ ಸೇರಲು ಆಹ್ವಾನಿಸಲಾಗುವುದು ಎಂದು ತಾಲಿಬಾನ್‍ ಮುಖ್ಯಸ್ಥ ಕ್ವಾರಿ ಫಸಿಹುದ್ದೀನ್ ಹೇಳಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!