ಡಿ. 9 : ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

ಕಾರ್ಕಳ : ಸೂಡ ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವದೊಂದಿಗೆ ಡಿ. 9 ರಂದು ಷಷ್ಠಿ ಮಹೋತ್ಸವವು ವೇ.ಮೂ. ಹಯವದನ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ವೇ. ಮೂ. ಶ್ರೀಶ ಭಟ್ ಅವರು ಪೌರೋಹಿತ್ಯದಲ್ಲಿ ವೈದಿಕ ಕಾರ್ಯ ನಡೆಯಲಿದೆ. ಡಿ. 12ರಂದು ಶ್ರೀ ಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ ಜರಗಲಿದೆ.

ಡಿ. 8ರಂದು ಧ್ವಜಾರೋಹಣ, ಮಹಾಪೂಜೆ, ಅನ್ನಸಂತರ್ಪಣೆ, ಡಿ. 9ರಂದು ಪಂಚಾಮೃತಾಭಿಷೇಕ, ಮಹಾಪೂಜೆ, ಷಷ್ಠಿ ಮಹೋತ್ಸವ, ರಥೋತ್ಸವ, ಮಹಾ ಅನ್ನಸಂತರ್ಪಣೆ, ರಾತ್ರಿ ರಥೋತ್ಸವ, ಡಿ. 11ರಂದು ಆಶ್ಲೇಷಾ ಬಲಿ, ಡಿ. 12ರಂದು ಮಹಾಪೂಜೆ, ರಥಾರೋಹಣ, ಸಂತರ್ಪಣೆ, ರಾತ್ರಿ ಮಹಾ ರಥೋತ್ಸವ, ಡಿ. 13ರಂದು ತುಲಾಭಾರ, ನಾಗದರ್ಶನ, ರಾತ್ರಿ ಜುಮಾದಿ ದೈವದ ನೇಮ ಜರಗಲಿವೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.





























































































































































































































error: Content is protected !!
Scroll to Top