Saturday, January 22, 2022
spot_img
Homeಅಂಕಣಕಗ್ಗದ ಸಂದೇಶ- ಮನಸ್ಸಿನಲ್ಲೇ ಇದೆ ಸುಖ ದು:ಖ

ಕಗ್ಗದ ಸಂದೇಶ- ಮನಸ್ಸಿನಲ್ಲೇ ಇದೆ ಸುಖ ದು:ಖ

“ಇಲ್ಲಿ ಚೆನ್ನಲ್ಲಿ ಚೆನ್ನೆಲ್ಲೊ ಚೆನ್ನೆನುತೆಣಿಸಿ|
ಹುಲ್ಲು
ಬಯಲೊಂದಡೆಯಿನೊಂದಕ್ಕೆ ನೆಗೆದು||
ಮೆಲ್ಲದೆಯೆ ಧಾವಿಸುತ ದಣಿವ ಕರುವನು ಪೋಲ್ತೊ|
ಡೆಲ್ಲಿಯೋ ಸೊಗ ನಿನಗೆ-ಮಂಕುತಿಮ್ಮ”.

‌ವಿಶಾಲವಾದ ಹುಲ್ಲಿನ ಬಯಲಿನಲ್ಲಿ ಮೇಯಲು ಬಿಟ್ಟ ಆಕಳ ಕರು ಇಲ್ಲಿ ಚೆನ್ನಾಗಿದೆ ಅಲ್ಲಿ ಚೆನ್ನಾಗಿದೆ ಎಂದು ಯೋಚಿಸಿ ಹುಲ್ಲನ್ನು ಮೇಯದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಂಗನೆ ನೆಗೆನೆಗೆದು ಓಡಾಡಿ ಆಯಾಸ ಹೊಂದುತ್ತದೆ.ಚಂಚಲ ಮನಸ್ಸಿನ ಕರುವಿನ ಹಾಗೆ ಅದರಲ್ಲಿ ಸುಖವಿದೆ ಇದರಲ್ಲಿ ಇದೆಯೆಂದು ನಾವು ವಿಷಯ ವಸ್ತುಗಳಲ್ಲಿ ಸುಖವನ್ನು ಹುಡುಕಿದರೆ ನೆಮ್ಮದಿ ಕೆಡುವುದೇ ಹೊರತು ಸುಖ ದೊರಕುವುದಿಲ್ಲವೆಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಸುಖವೆಂದರೇನು? ಎಂಬ ಅರಿವಿಲ್ಲದೆ ಅದನ್ನು ಪಡೆಯುವ ಪರದಾಟ ನಿರಂತರವಾಗಿ ನಮ್ಮ ಬದುಕಿನಲ್ಲಿ ನಡೆದುಕೊಂಡು ಬಂದಿದೆ.ಕ್ಷಣಿಕವಾದ ಇಂದ್ರಿಯ ಸುಖಕ್ಕೊಸ್ಕರ ದೀರ್ಘಕಾಲದ ನೆಮ್ಮದಿಯನ್ನು ಕಳೆದುಕೊಳ್ಳುವುದು ವಿಪರ್ಯಾಸದ ಸಂಗತಿ.ಸುಖವೆನ್ನುವುದು ಹೊರಗಿನ ವಿಷಯವಸ್ತುಗಳಲ್ಲಿ ಇಲ್ಲ. ನಮ್ಮ ಮನಸ್ಸಿನೊಳಗಡೆಯೆ ನೆಮ್ಮದಿಯ ತಾಣವಿದೆ.ಸುಖವೆನ್ನುವುದು ಹುಡುಕಿದರೆ ಸಿಗುವ ವಸ್ತುವಲ್ಲ ಅದನ್ನು ನಾವು ಕಂಡುಕೊಳ್ಳಬೇಕು.ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಮತ್ತು ಬಾಂಧವ್ಯವೂ ಹುಟ್ಟುತ್ತದೆ.ಈ ಬಾಂಧವ್ಯದಿಂದಲೇ ಮನಸ್ಸು ಚಂಚಲವಾಗುವುದು.
” ಮನಯೇವಾ ಮನುಷ್ಯಾಣಾಂ ಬಂಧ ಮೋಕ್ಷಯೋ” ಅಂದರೆ ಮನುಷ್ಯನ ಬಂಧನ ಮತ್ತು ಬಿಡುಗಡೆಗೆ ಮನಸ್ಸೇ ಕಾರಣ.ಮನಸ್ಸಿನ ದೃಢತೆಯಲ್ಲಿಯೇ ಸುಖ ಪ್ರಾಪ್ತವಾಗುವುದು.ಮನಸ್ಸಿನ ಶಕ್ತಿ ಅಗಾಧವಾಗಿದ್ದು ಮನಸ್ಸು ಹಸನಾಗಿದ್ದರೆ ಮಾತ್ರ ಮನುಷ್ಯ ಬುದ್ಧನಾಗುತ್ತಾನೆ,ಸಿದ್ಧವಾಗುತ್ತಾನೆ.”ನೀನು ಈ ದಿನವನ್ನು ನೋಡಿಕೋ ಅದು ನಿನ್ನ ನಾಳೆಯನ್ನು ನೋಡಿಕೊಳ್ಳುತ್ತದೆ; ಭೂತ ಭವಿಷತ್ತುಗಳ ಕುರಿತು ಚಿಂತಿಸದೆ ಈ ದಿನ ಈ ಕ್ಷಣ ಮಾತ್ರ ನಿನ್ನದು” ಎನ್ನುವ ಭಾವ ನಮ್ಮದಾದಾಗಲೇ ಜೀವನ ಸಾರ್ಥಕವಾಗುವುದಲ್ಲವೇ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್,ಕಾರ್ಕಳ ಘಟಕ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!