Thursday, August 18, 2022
spot_img
Homeಸಾಹಿತ್ಯ/ಸಂಸ್ಕೃತಿಸ್ವರಾಜ್‌ ಮೈದಾನದಲ್ಲಿ ಕಾರ್ಯಾಲಯ ಉದ್ಘಾಟನೆ

ಸ್ವರಾಜ್‌ ಮೈದಾನದಲ್ಲಿ ಕಾರ್ಯಾಲಯ ಉದ್ಘಾಟನೆ

ಕಾರ್ಕಳ : ಕಾರ್ಕಳ ಉತ್ಸವದೊಂದಿಗೆ ನಮ್ಮೂರಿಗೆ ವಿಶೇಷ ಸ್ಥಾನ ದೊರೆಯಲಿದೆ. ಈ ಮೂಲಕ ದೇಶ, ವಿದೇಶದಲ್ಲೂ ಕಾರ್ಕಳ ಮತ್ತಷ್ಟು ಪ್ರಸಿದ್ಧಿ ಪಡೆಯಲಿದೆ ಎಂದು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಹೇಳಿದರು.

ಅವರು ಡಿ. 5ರಂದು ಕಾರ್ಕಳ ಸ್ವರಾಜ್‌ ಮೈದಾನದಲ್ಲಿ ಕಾರ್ಕಳ ಉತ್ಸವ ನಿಮಿತ್ತ ನಿರ್ಮಿಸಲಾದ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಹಿರಿಯರು ಕಾರ್ಕಳವನ್ನು ಕಲೆ, ಶಿಲ್ಪಕಲೆ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿರುತ್ತಾರೆ. ಆ ಪರಂಪರೆ ಮುಂದುವರಿಸುವ ನಿಟ್ಟಿನಲ್ಲಿ ಸಚಿವ ಸುನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಕಾರ್ಕಳ ಉತ್ಸವ ನಡೆಯುತ್ತಿದ್ದು, ನಮಗೆಲ್ಲ ಅತ್ಯಂತ ಸಂತಸದ ವಿಚಾರವೆಂದರು.

ಎಲ್ಲ ಚಟುವಟಿಕೆಗೆ ಕೇಂದ್ರ ಸ್ಥಾನ
ಸಚಿವ, ಕಾರ್ಕಳ ಉತ್ಸವದ ರೂವಾರಿ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಕಾರ್ಯಾಲಯ ಎಲ್ಲ ಚಟುವಟಿಕೆಗಳಿಗೆ ಕೇಂದ್ರ ಸ್ಥಾನವಾಗಿರಲಿದೆ. ಯಾವುದೇ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಉತ್ಸವಕ್ಕೆ ಸಿದ್ಧತೆ ನಡೆದಿರಲಿಲ್ಲ. ಸುಮಾರು 10 ಸಾವಿರ ಕಲಾವಿದರು, 250 ವಸ್ತುಪ್ರದರ್ಶನ ಮಳಿಗೆ ಉತ್ಸವದಲ್ಲಿರಲಿದೆ. ಕಾರ್ಕಳ ಉತ್ಸವ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿದೆ ಎಂದರು.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ನಿಯಮಾವಳಿ ಸರಕಾರದಿಂದ ಘೋಷಣೆಯಾಗಲಿದೆಯೇ ಎಂಬ ಆತಂಕದ ಕುರಿತು ಹಲವಾರು ಮಂದಿ ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಯಾವುದೇ ಭಯ ಬೇಡ. ಡಿ. 18ರ ವರೆಗೆ ಟಿವಿ ಮಾ‍ಧ್ಯಮ ನೋಡುವುದನ್ನು ಕಡಿಮೆ ಮಾಡೋಣ. ಕೊರೊನಾ ಆತಂಕ ದೂರವಾಗುವುದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಗೇರು ನಿಗಮದ ಅ‍ಧ್ಯಕ್ಷ ಮಣಿರಾಜ್‌ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಾಲಯ ಪ್ರಬಂಧಕ ಪ್ರವೀಣ್‌ ಸಾಲ್ಯಾನ್‌ ಸ್ವಾಗತಿಸಿ, ಸುಮಾ ರವಿಕಾಂತ್‌ ಪ್ರಾರ್ಥಿಸಿ, ಯೋಗೀಶ್‌ ಕಿಣಿ ಕಾರ್ಕಳ ಗೀತೆ ಹಾಡಿದರು. ಜ್ಯೋತಿ ರಮೇಶ್‌ ನಿರೂಪಿಸಿ, ರಾಜಾರಾಂ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!