Wednesday, January 26, 2022
spot_img
Homeಕ್ರೀಡೆ62 ರನ್ ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್

62 ರನ್ ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಕೇವಲ 62ರನ್ ಗಳಿಗೆ ಆಲೌಟ್ ಆಗಿರುವ ನ್ಯೂಜಿಲೆಂಡ್ ಹೆಸರಿನಲ್ಲಿ ನಾಲ್ಕು ಕಳಪೆ ದಾಖಲೆ ನಿರ್ಮಾಣವಾಗಿದೆ.

ಭಾರತ ನೀಡಿದ 325ರನ್ ಗಳ ಮೊದಲ ಇನ್ನಿಂಗ್ಸ್ ಗುರಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿ, ಕೇವಲ 62ರನ್ ಗಳಿಗೆ ಆಲೌಟ್ ಆಗಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ತನ್ನ ಹೆಸರಿಗೆ ನಾಲ್ಕು ಕಳಪೆ ದಾಖಲನ್ನು ಹಾಕಿಕೊಂಡಿದೆ.

ಇನ್ನು ಇದು ಭಾರತದಲ್ಲಿ ನ್ಯೂಜಿಲೆಂಡ್ ತಂಡ ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್ ವೊಂದರಲ್ಲಿ ಗಳಿಸಿದ ಅತ್ಯಂತ ಕನಿಷ್ಟ ಸ್ಕೋರ್ ಆಗಿದ್ದು, ಈ ಹಿಂದೆ 1987ರಲ್ಲಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗಳಿಸಿದ್ದ 75 ರನ್ ಗಳು ಕನಿಷ್ಠ ಸ್ಕೋರ್ ಆಗಿತ್ತು. ಬಳಿಕ 2008ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 75ರನ್ ಗಳಿಗೆ ಆಲೌಟ್ ಆಗಿತ್ತು. ಇದು ಭಾರತದಲ್ಲಿ ದಾಖಲಾದ 2ನೇ ಕನಿಷ್ಛ ಮೊತ್ತವಾಗಿತ್ತು. 2015ರಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 79ರನ್ ಗಳಿಗೆ ಆಲೌಟ್ ಆಗಿತ್ತು. ಇದು ತಂಡವೊಂದರ ಮೂರನೇ ಕನಿಷ್ಠ ಮೊತ್ತವಾಗಿತ್ತು. ಆದರೆ ಈ ಮೂರು ದಾಖಲೆಗಳನ್ನು ಇದೀಗ ನ್ಯೂಜಿಲೆಂಡ್ ತಂಡ ಹಿಂದಿಕ್ಕಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!