Wednesday, January 26, 2022
spot_img
Homeಸಿನೆಮಾಇಂದು ಬಹುನಿರೀಕ್ಷಿತ ಕಾರ್ನಿಕೊದ ಕಲ್ಲುರ್ಟಿ ಕಲ್ಕುಡ ಚಿತ್ರ ಬಿಡುಗಡೆ

ಇಂದು ಬಹುನಿರೀಕ್ಷಿತ ಕಾರ್ನಿಕೊದ ಕಲ್ಲುರ್ಟಿ ಕಲ್ಕುಡ ಚಿತ್ರ ಬಿಡುಗಡೆ

ಕಾರ್ಕಳ : ಮೂಲ ಪಾಡ್ದನ ಆಧಾರಿತ ಫಿನಿಕ್ಸ್‌ ಫಿಲಂಸ್‌ ಅರ್ಪಿಸುವ ಬಹುನಿರೀಕ್ಷಿತ ಕಾರ್ನಿಕೊದ ಕಲ್ಲುರ್ಟಿ ಕಲ್ಕುಡ ತುಳು ಚಲನಚಿತ್ರ ಇಂದಿನಿಂದ ಕಾರ್ಕಳ ರಾಧಿಕಾ ಚಿತ್ರ ಮಂದಿರ ಸೇರಿದಂತೆ ದ.ಕ., ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲೂ ಪ್ರದರ್ಶನಗೊಳ್ಳಲಿದೆ. ಕಾರ್ಕಳ ರಾಧಿಕಾ ಚಿತ್ರಮಂದಿರದಲ್ಲಿ ಬೆಳಗ್ಗೆ 10, ಮಧ್ಯಾಹ್ನ 1, ಸಂಜೆ 4 ಹಾಗೂ 7 ಗಂಟೆಗೆ ಪ್ರತಿದಿನ 4 ದೇಖಾವೆ ಪ್ರದರ್ಶನಗೊಳ್ಳಲಿದೆ. ಮಹೇಂದ್ರ ಕುಮಾರ್‌ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಕನ್ನಡದ ಖ್ಯಾತ ಚಲನಚಿತ್ರ ನಟ ರಮೇಶ್‌ ಭಟ್‌, ರಂಜಿತ್‌ ಪೂಜಾರಿ ಶಿರ್ವ, ತೃಪ್ತಿ ಪೂಜಾರಿ ಪುಣೆ ಅಭಿನಯದಲ್ಲಿ ತುಳು ಚಲನಚಿತ್ರ ರಂಗದಲ್ಲಿ ವಿಭಿನ್ನ, ಅದ್ಧೂರಿಯಾಗಿ ಚಿತ್ರ ನಿರ್ಮಾಣಗೊಂಡಿದೆ. ಚಿತ್ರವು ಹಿತನ್‌ ಹಾಸನ್‌ ಸಂಗೀತ ನಿರ್ದೇಶನ, ಕಂಠದಲ್ಲಿ 5 ಅತ್ಯದ್ಭುತ ಹಾಡು ಹೊಂದಿದೆ. ಚಿತ್ರಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಆಗಮಿಸಿ, ಚಿತ್ರ ವೀಕ್ಷಿಸಿ, ತುಳು ಚಿತ್ರ ಬೆಂಬಲಿಸುವಂತೆ ನಿರ್ಮಾಪಕ ಮಹೇಂದ್ರ ಅವರು ಮನವಿ ಮಾಡಿಕೊಂಡಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!