Saturday, January 22, 2022
spot_img
Homeಜಿಲ್ಲಾಅಕ್ರಮವಾಗಿ ಗನ್ ಇರಿಸಿಕೊಂಡು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವಕನ ಬಂಧನ

ಅಕ್ರಮವಾಗಿ ಗನ್ ಇರಿಸಿಕೊಂಡು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವಕನ ಬಂಧನ

ಮಂಗಳೂರು : ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಗನ್‌ ಇರಿಸಿಕೊಂಡಿದ್ದ ಯುವಕನನ್ನು ಸಿಐಎಸೆಫ್‌ ಭದ್ರತಾ ಸಿಬಂದಿ ಬಂಧಿಸಿದ್ದಾರೆ.
ಬ್ರಹ್ಮಾವರ ಮೂಲದ ರೆನಾಲ್ಡ್‌ ಡಿಸೋಜ (24) ಬಂಧಿತ ಯುವಕ. ಈತ ವಿದೇಶದಿಂದ ಬಂದಿದ್ದ ತನ್ನ ಸಂಬಂಧಿಕ ವ್ಯಕ್ತಿಯನ್ನು ಕಾರಿನಲ್ಲಿ ಕರೆದೊಯ್ಯಲು ಏರ್ಪೋಟ್‌ನ ಆವರಣಕ್ಕೆ ಬಂದಿದ್ದ. ಕಾರನ್ನು ಪಾರ್ಕಿಂಗ್‌ ಏರಿಯಾದಲ್ಲಿ ಪಾರ್ಕ್‌ ಮಾಡಿದ್ದಾಗ ಸಿಐಎಸ್‌ಎಫ್ ಭದ್ರತಾ ಸಿಬಂದಿ ತಪಾಸಣೆ ನಡೆಸುತಿದ್ದರು.
ಈ ವೇಳೆ, ಕಾರಿನ ಮುಂಭಾಗದಲ್ಲಿ ಎರಡು ಕಂಟ್ರಿ ಮೇಡ್‌ ಪಿಸ್ತೂಲ್‌ ಪತ್ತೆಯಾಗಿದ್ದು ಈ ಬಗ್ಗೆ ಯುವಕನನ್ನು ವಚಾರಣೆ ನಡೆಸಿದ್ದಾರೆ. ಗನ್‌ ಹೊಂದಿರುವುದಕ್ಕೆ ಲೈಸೆನ್ಸ್‌ ಇಲ್ಲದ ಕಾರಣ ಯುವಕನನ್ನು ಭದ್ರತಾ ಸಿಬಂದಿ ವಶಕ್ಕೆ ಪಡೆದಿದ್ದು, ಬಜ್ಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ಕೋರ್ಟಿಗೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!