Wednesday, January 26, 2022
spot_img
Homeಸುದ್ದಿ37 ವರ್ಷದಿಂದ ಕಾಣೆಯಾಗಿದ್ದ ವಿಮಾನ ಕೊನೆಗೂ ಲ್ಯಾಂಡ್ ಆಯ್ತು..

37 ವರ್ಷದಿಂದ ಕಾಣೆಯಾಗಿದ್ದ ವಿಮಾನ ಕೊನೆಗೂ ಲ್ಯಾಂಡ್ ಆಯ್ತು..

ಪ್ರಪಂಚದಲ್ಲಿ ಅನೇಕ ರಹಸ್ಯಕರ ಘಟನೆಗಳು ನಡೆಯುತ್ತಲೆ ಇರುತ್ತವೆ. ಈ ದಿನ ಓದುಗರಿಗೆ ತಿಳಿಸುತ್ತಿರುವ ವಿಸ್ಮಯಕಾರಿ ಘಟನೆ ಆಶ್ಚರ್ಯಕರವಾಗಿದೆ.

37 ವರ್ಷಗಳ ನಂತರ ವಿಮಾನವು ಲ್ಯಾಂಡ್ ಆಗಿದೆ. 1954ರಲ್ಲಿ ನಡೆದ ಈ ಘಟನೆ ಬಹಳ ನಿಗೂಢವಾಗಿದೆ. ಈ ವಿಮಾನದ ಹೆಸರು ಸ್ಯಾಂಟಿಯಾಗೊ ಏರ್ಲೈನ್ಸ್, ವಿಮಾನದ ಸಂಖ್ಯೆ 513, 1954ರಲ್ಲಿ ಸ್ಯಾಂಟಿಯಾಗೊ ಏರ್ಲೈನ್ಸ್ ಪಶ್ಚಿಮ ಜರ್ಮನಿಯ ಸ್ಯಾಂಟಿಯಾಗೊ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಎಲ್ಲಿಯೂ ಲ್ಯಾಂಡ್ ಆಗದೆ ಎಲ್ಲಿಗೆ ಹೋಯಿತೆಂದು ಅದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ.

ಒಟ್ಟು 92 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ 1954 ಸೆಪ್ಟೆಂಬರ್ 04 ರಂದು ಕಾಣಿಯಾಗಿತ್ತು, ಹಾರಾಟ ಪಾರಂಭಿಸಿದ 18 ಗಂಟೆಗಳ ನಂತರ ವಿಮಾನವು ಬ್ರೆಜಿಲ್‌ನ ಏರಮೋರ್ಟ್ ತಲುಪಬೇಕಿತ್ತು.

ಆದರೆ ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಕಣ್ಮರೆಯಾಯಿತು. ಲಕ್ಷಾಂತರ ಪ್ರಯತ್ನಗಳ ನಂತರವೂ ಈ ವಿಮಾನದ ಕುರಿತಾಗಿ ಯಾವುದೇ ಮಾಹಿತಿ ಸಿಗಲಿಲ್ಲ. ಈ ಘಟನೆ ನಡೆದು 37 ವರ್ಷಗಳಾಗಿದ್ದವು. ಬರೋಬ್ಬರಿ 37 ವರ್ಷಗಳ ನಂತರ ಇದ್ದಕ್ಕಿದಂತೆ ವಿಮಾನವು ವಿಮಾನ ನಿಲ್ದಾಣಕ್ಕೆ 13) ಯಾವುದೇ ಸೂಚನೆಗಳನ್ನು ನೀಡದೆ ಬರುತ್ತಿತ್ತು.

ಈ ವಿಮಾನ ಬರುತ್ತಿದ್ದ ಕಾರಣ ಬೇರೆ ವಿಮಾನಗಳ ರನ್ ವೇಯನ್ನು ತಡೆಯಬೇಕಾಯಿತು. ವಿಮಾನ ಇದ್ದಕ್ಕಿದಂತೆ ಕಾಣಿಸಿಕೊಂಡಾಗ ಅಲ್ಲಿನ ಅಧಿಕಾರಿಗಳು ವಿಮಾನವು ಯಾವ ದಿಕ್ಕಿನಲ್ಲಿ ಬರುತ್ತಿದೆ. ಎಂದು ರನ್‌ವೇಯನ್ನು ತ್ವರಿತವಾಗಿ ತೆರವುಗೊಳಿಸಲಾಯಿತು.

ವಿಮಾನವು ರನ್‌ವೇಗೆ ಇಳಿದಾಗ ವಿಮಾನದ ಮೇಲ್ಬಾಗದಲ್ಲಿ ಸ್ಕಾಂಟಿಯಾಗೊ ಏರ್‌ಲೈನ್ಸ್‌ನ ಹೆಸರು 513 ಎಂಬ ವಿಮಾನ ಸಂಖ್ಯೆಯನ್ನು ನೋಡಿದರು. ಈ ಬಗ್ಗೆ ವಿಚಾರಣೆ ಮಾಡಿದಾಗ, ಅದು 37 ವರ್ಷಗಳ ಹಿಂದೆ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಕಣ್ಮರೆಯಾದ ವಿಮಾನವೆಂದು ತಿಳಿದು ಬಂತು.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!