Thursday, December 2, 2021
spot_img
Homeಸುದ್ದಿಕಾರ್ಕಳದ ಮರಳು ಗುತ್ತಿಗೆದಾರನ ನೀರಿನಲ್ಲಿ ಮುಳುಗಿಸಿ ಕೊಲೆಯತ್ನ

ಕಾರ್ಕಳದ ಮರಳು ಗುತ್ತಿಗೆದಾರನ ನೀರಿನಲ್ಲಿ ಮುಳುಗಿಸಿ ಕೊಲೆಯತ್ನ

ಕಾರ್ಕಳ : ತಾಲೂಕಿನ ಇನ್ನಾ ಗ್ರಾಮದ ಮೈಕ್ರೋ ಇನ್ ಸಮೀಪ ಕೊರಗ ಕಾಲೊನಿ ನಿವಾಸಿ ಕೃಷ್ಣ ಕೊರಗ (38) ಎಂಬವರನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೆ ಯತ್ನಿಸಲಾಗಿದೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೃಷ್ಣ ಕೊರಗ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ಕೋಟಾದಡಿಯಲ್ಲಿ ಉಡುಪಿ ಜಿಲ್ಲಾಡಳಿತವು ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲು ಪರವಾನಿಗೆ ನೀಡಿದೆ.

ಪರವಾನಿಗೆಯಂತೆ ಅವರು ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ ಕುಕ್ಕುಡೆ ಭಜನಾ ಮಂದಿರದ ಬಳಿಯಿರುವ ಉಲ್ಲಾಸ್ ಶೆಟ್ಟಿ ಎಂಬವರ ಪಟ್ಟಾಸ್ಥಳವನ್ನು ಬಾಡಿಗೆ ಪಡೆದು ಅಲ್ಲಿ ಮರಳು ಧಕ್ಕೆಯನ್ನು ನಿರ್ಮಿಸಿದ್ದು, ಅಲ್ಲಿ ಕೃಷ್ಣ ಕೊರಗ ದೋಣಿಯನ್ನು ಕಟ್ಟುತ್ತಿರುವ ವೇಳೆ ಆರೋಪಿಗಳಾದ ಹಾರಾಡಿ ಗ್ರಾಮದ ಉದಯ ಸುವರ್ಣ, ದಯಾನಂದ ಹಾಗೂ ಸುಖಾನಂದ ಎಂಬವರು ಏಕಾಏಕಿ ನುಗ್ಗಿ ಕೃಷ್ಣ ಕೊರಗ ಅವರ ಮೇಲೆ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ, ನೀರಿನಲ್ಲಿ ಮುಳುಗಿಸಿ ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.

ಈ ಕುರಿತು ಕೃಷ್ಣ ಕೊರಗ ಅವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!