Thursday, December 2, 2021
spot_img
Homeಸ್ಥಳೀಯ ಸುದ್ದಿಹೆಬ್ರಿ : ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು

ಹೆಬ್ರಿ : ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು

ಕಾರ್ಕಳ : ಈಜಲು ತೆರಳಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಭಟ್ರಾಡಿ ಎಂಬಲ್ಲಿ ನ. 26ರಂದು ಸಂಭವಿಸಿದೆ. ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಈಜಲು ಭಟ್ರಾಡಿ ತೆರಳಿದ್ದರು. ಅವರಲ್ಲಿ ಮೂವರು ನೀರುಪಾಲಾಗಿದ್ದು, ಮೂವರ ಮೃತದೇಹ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಗಳು ಪೆರ್ಡೂರು ಗ್ರಾಮದ ಪಾಡಿಗಾರದ ಸುದರ್ಶನ, ಕಿರಣ್‌ ಹಾಗೂ ಹಿರಿಯಡ್ಕದ ಸೋನಿತ್‌ ಎಂದು ಗುರುತಿಸಲಾಗಿದೆ.

ಮೃಹದೇಹವನ್ನು ಮೇಲಕ್ಕೆತ್ತುವಲ್ಲಿ ಚಾರ ಗ್ರಾಮದ ಕೆಂಚ, ಶಿವಪುರದ ವಿಜಯ ಶೇರಿಗಾರ್‌, ಸದಾನಂದ ಶಿವಪುರ, ಕೃಷ್ಣಮೂರ್ತಿ ಶ್ರಮಿಸಿದ್ದರು. ತಹಶೀಲ್ದಾರ್‌ ಕೆ. ಪುರಂದರ್‌, ಹೆಬ್ರಿ ಪೊಲೀಸ್‌ ಠಾಣೆ ಎಸ್‌ಐ ಮಹೇಶ್‌ ತಂಡ, ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ರಮೇಶ್‌ ಪೂಜಾರಿ, ಗ್ರಾ.ಪಂ. ಸದಸ್ಯ ಸಂತೋಷ್‌ ಶೆಟ್ಟಿ, ಪಂಚಾಯತ್‌ ಮಾಜಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಶಿವಪುರ, ಮಾಜಿ ಉಪಾಧ್ಯಕ್ಷ ಉದಯ ಕುಮಾರ್‌, ಶಿವಪುರ ಗ್ರಾ.ಪಂ. ಅಧ್ಯಕ್ಷ ಶೇಖರ್‌ ಶೆಟ್ಟಿ, ಉಪಾಧ್ಯಕ್ಷ ಶ್ವೇತಾ ರಾಘವೆಂದ್ರ ಪಂಚಾಯತ್‌ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!