Thursday, December 2, 2021
spot_img
Homeಸುದ್ದಿನ.28 : ಕಾರ್ಕಳದಲ್ಲಿ ವಿಶ್ವಕರ್ಮ ಸಮಾಜದವರಿಗೆ ಹೆಲ್ತ್ ಕಾರ್ಡ್ ಅಭಿಯಾನ

ನ.28 : ಕಾರ್ಕಳದಲ್ಲಿ ವಿಶ್ವಕರ್ಮ ಸಮಾಜದವರಿಗೆ ಹೆಲ್ತ್ ಕಾರ್ಡ್ ಅಭಿಯಾನ

ಕಾರ್ಕಳ : ವಿಶ್ವಕರ್ಮ ಒಕ್ಕೂಟ (ರಿ.) ಉಡುಪಿ ಇದರ ವತಿಯಿಂದ ವಿಶ್ವಕರ್ಮ ಸಮಾಜದವರಿಗೆ ವಿಶೇಷ ಹೆಲ್ತ್ ಕಾರ್ಡ್ ನೀಡಲಾಗುತ್ತಿದೆ. ಕಾರ್ಕಳ ವಿಧಾನಸಭಾ ವ್ಯಾಪ್ತಿಯ ವಿಶ್ವಕರ್ಮ ಸಮಾಜದವರಿಗೆ ಅನುಕೂಲವಾಗುವಂತೆ ಹೆಲ್ತ್ ಕಾರ್ಡ್ ಅಭಿಯಾನವನ್ನು ನ.28ರಂದು ಆದಿತ್ಯವಾರ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 09:30 ರಿಂದ ಸಾಯಂಕಾಲ 4:30ರ ವರೆಗೆ ಹೆಲ್ತ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ.

ಅಭಿಯಾನದಲ್ಲಿ ಹೆಲ್ತ್ ಕಾರ್ಡ್ ನೋಂದಣಿಗೆ ಅರ್ಜಿ ಫಾರಂ ಲಭ್ಯವಿರುತ್ತದೆ, ಜೊತೆಗೆ ನೋಂದಣಿಗೆ ಸಹಕರಿಸಲು ಸ್ವಯಂ ಸೇವಕರ ತಂಡ ಹಾಗೂ ಹೆಲ್ಪ್ ಡೆಸ್ಕ್ ಇರಲಿದೆ.

ಹೆಲ್ತ್ ಕಾರ್ಡ್ ಮಾಡಲಿಚ್ಚಿಸುವವರು 1,500 ರೂಪಾಯಿಗಳ ಜತೆಗೆ ರೇಶನ್ ಕಾರ್ಡ್ ಜೆರಾಕ್ಸ್ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್ ನೀಡಿ ಹೆಲ್ತ್ ಕಾರ್ಡಿಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ವಿಶ್ವಕರ್ಮ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಅಭಿಯಾನ ಆಯೋಜಕರಾಗಿರುವ ಹರ್ಷವರ್ಧನ್ ನಿಟ್ಟೆ ತಿಳಿಸಿದ್ದಾರೆ.

ವಾರ್ಷಿಕ 1,500 ರೂಪಾಯಿಗಳನ್ನು ಪಾವತಿಸಿ ಆರೋಗ್ಯ ಕಾರ್ಡ್ ಮಾಡಿಸಿದಲ್ಲಿ, ಕುಟುಂಬದ ಗರಿಷ್ಠ 5 ಜನರಿಗೆ ಒಟ್ಟು 50,000 ರೂಪಾಯಿಗಳ ಆರೋಗ್ಯ ಸುರಕ್ಷೆಯನ್ನು ಪಡೆದು ಕೊಳ್ಳಬಹುದು. ವಿಶ್ವಕರ್ಮ ಸಮಾಜದ ಬಹುತೇಕ ಜನರು ಕುಲ ಕಸುಬು ಹಾಗೂ ಖಾಸಗಿ ವೃತ್ತಿ ಮಾಡಿಕೊಂಡಿರುವುದರಿಂದ ಬಹಳಷ್ಟು ಜನರಿಗೆ ಯಾವುದೇ ರೀತಿಯ ಆರೋಗ್ಯ ಭದ್ರತೆ ಇರುವುದಿಲ್ಲ ಹಾಗಾಗಿ ಈ ಯೋಜನೆ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹಾಗೂ ಮಾನಸಿಕ ಧೈರ್ಯ ತುಂಬಿ, ತುರ್ತು ಸಂದರ್ಭಗಳಲ್ಲಿ ತುಂಬಾ ಸಹಕಾರಿಯಾಗಲಿದೆ, ಹೆಚ್ಚಿನ ಸಮಾಜ ಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಯೋಜನೆಯನ್ನು ವಿಶ್ವಕರ್ಮ ಸಮಾಜಕ್ಕಾಗಿ ವಿಶ್ವಕರ್ಮ ಒಕ್ಕೂಟವು ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶುರೆನ್ಸ್ ಕಂಪನಿಯ ಸಹಯೋಗದೊಂದಿಗೆ ಪ್ರಸ್ತುತ ಪಡಿಸುತ್ತಿದೆ. ಈ ಹೆಲ್ತ್ ಕಾರ್ಡ್ ನೋಂದಣಿಗೆ ಕೊನೆಯ ದಿನಾಂಕ 30-11-2021.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!