Thursday, December 2, 2021
spot_img
Homeಸ್ಥಳೀಯ ಸುದ್ದಿನ. 28 : ಕಾರ್ಕಳದಲ್ಲಿ ಹೆಲ್ತ್ ಕಾರ್ಡ್ ಅಭಿಯಾನಕ್ಕೆ ಚಾಲನೆ

ನ. 28 : ಕಾರ್ಕಳದಲ್ಲಿ ಹೆಲ್ತ್ ಕಾರ್ಡ್ ಅಭಿಯಾನಕ್ಕೆ ಚಾಲನೆ

ಸಿಗ್ನಾ ಹೆಲ್ತ್‌ ಇನ್ಸೂರನ್ಸ್‌ ಜೊತೆಗೆ ವಿಶ್ವಕರ್ಮ ಒಕ್ಕೂಟ ಒಪ್ಪಂದ

ಕಾರ್ಕಳ : ವಿಶ್ವಕರ್ಮ ಒಕ್ಕೂಟ ಉಡುಪಿ ಇದರ ವತಿಯಿಂದ ವಿಶ್ವಕರ್ಮ ಸಮಾಜದವರಿಗೆ ವಿಶೇಷ ಹೆಲ್ತ್ ಕಾರ್ಡ್ ನೀಡಲಾಗುತ್ತಿದೆ. ಕಾರ್ಕಳ ವಿಧಾನಸಭಾ ವ್ಯಾಪ್ತಿಯ ವಿಶ್ವಕರ್ಮ ಸಮಾಜದವರಿಗೆ ಅನುಕೂಲವಾಗುವಂತೆ ಹೆಲ್ತ್ ಕಾರ್ಡ್ ಅಭಿಯಾನವನ್ನು ನ. 28ರ ರವಿವಾರ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9:30 ರಿಂದ ಸಾಯಂಕಾಲ 4:30ರವರೆಗೆ ಹೆಲ್ತ್ ಕಾರ್ಡ್ ನೋಂದಣಿ ನಡೆಯಲಿದೆ.
ಹೆಲ್ತ್ ಕಾರ್ಡ್ ಮಾಡಲಿಚ್ಚಿಸುವವರು 1,500 ರೂ.ಗಳ ಜತೆಗೆ ರೇಶನ್ ಕಾರ್ಡ್ ಜೆರಾಕ್ಸ್ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್ ಕಾರ್ಡ್ ಜೆರಾಕ್ಸ್ ನೀಡಿ ಹೆಲ್ತ್ ಕಾರ್ಡಿಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ವಿಶ್ವಕರ್ಮ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಅಭಿಯಾನ ಆಯೋಜಕರಾಗಿರುವ ಹರ್ಷವರ್ಧನ್ ನಿಟ್ಟೆ ತಿಳಿಸಿದ್ದಾರೆ.

ವಾರ್ಷಿಕ 1,500 ರೂ. ಪಾವತಿಸಿ ಆರೋಗ್ಯ ಕಾರ್ಡ್ ಮಾಡಿಸಿದಲ್ಲಿ, ಕುಟುಂಬದ ಗರಿಷ್ಠ 5 ಜನರಿಗೆ ಒಟ್ಟು 50,000 ರೂ. ಆರೋಗ್ಯ ಸುರಕ್ಷೆಯನ್ನು ಪಡೆದು ಕೊಳ್ಳಬಹುದಾಗಿದೆ. ವಿಶ್ವಕರ್ಮ ಸಮಾಜದ ಬಹುತೇಕ ಜನರು ಕುಲ ಕಸುಬು ಹಾಗೂ ಖಾಸಗಿ ವೃತ್ತಿ ಮಾಡಿಕೊಂಡಿರುವುದರಿಂದ ಬಹಳಷ್ಟು ಜನರಿಗೆ ಯಾವುದೇ ರೀತಿಯ ಆರೋಗ್ಯ ಭದ್ರತೆ ಇರುವುದಿಲ್ಲ. ಹಾಗಾಗಿ ಈ ಯೋಜನೆ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹಾಗೂ ಮಾನಸಿಕ ಧೈರ್ಯ ನೀಡಿ, ತುರ್ತು ಸಂದರ್ಭಗಳಲ್ಲಿ ತುಂಬಾ ಸಹಕಾರಿಯಾಗಲಿದ್ದು, ಹೆಚ್ಚಿನ ಸಮಾಜ ಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹರ್ಷವರ್ಧನ್ ಮನವಿ ಮಾಡಿದ್ದಾರೆ. ಈ ಯೋಜನೆಯನ್ನು ವಿಶ್ವಕರ್ಮ ಸಮಾಜಕ್ಕಾಗಿ ವಿಶ್ವಕರ್ಮ ಒಕ್ಕೂಟವು ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ಹೆಲ್ತ್ ಕಾರ್ಡ್ ನೀಡಲಾಗುತ್ತಿದ್ದು, ನವೆಂಬರ್‌ 30ರಂದು ನೋಂದಣಿಗೆ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 8310193725 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!