Thursday, December 2, 2021
spot_img
Homeಸುದ್ದಿಕಾರ್ಕಳ: ಮತದಾರರ ಪಟ್ಟಿಗೆ ಸೇರ್ಪಡೆ, ಬದಲಾವಣೆಗೆ ಡಿ.8ರ ರನಕ ಅವಕಾಶ-ತಹಶೀಲ್ದಾರ್ ಕೆ.ಪುರಂದರ

ಕಾರ್ಕಳ: ಮತದಾರರ ಪಟ್ಟಿಗೆ ಸೇರ್ಪಡೆ, ಬದಲಾವಣೆಗೆ ಡಿ.8ರ ರನಕ ಅವಕಾಶ-ತಹಶೀಲ್ದಾರ್ ಕೆ.ಪುರಂದರ

ಕಾರ್ಕಳ : ಚುನಾವಣಾ ಆಯೋಗವು 2022 ಸಾಲಿನ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು 2021 ನ. 8ರಿಂದ 2021 ಡಿ. 8ರ ತನಕ ನಿಗದಿಪಡಿಸಿದೆ. ಅದರಂತೆ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿಯೂ ಹೊಸ ಮತದಾರರ ಪಟ್ಟಿಗೆ, ಸೇರ್ಪಡೆ, ಬದಲಾವಣೆ, ಗುರುತಿನ ಚೀಟಿ ಕಳೆಕೊಂಡಿದ್ದಲ್ಲಿ ಹೊಸ ಚೀಟಿ ಪಡೆದು ಕೊಳ್ಳುವುದು ಸಹಿತ ಇನ್ನಿತರ ಕಾರ್ಯಗಳು ನಡೆಯಲಿವೆ ಎಂದು ಕಾರ್ಕಳ ತಹಶೀಲ್ದಾರ್ ಕೆ. ಪುರಂದರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೊಸ ಮತದಾರರು, ಮತದಾರರ ಪಟ್ಟಿಗೆ ಸೇರ್ಪಡೆ, ಕ್ಷೇತ್ರ ಬದಲಾವಣೆ, ವಾಸಸ್ಥಳ ಬದಲಾವಣೆ, ಮತಗಟ್ಟೆ ಬದಲಾವಣೆ ಇನ್ನಿತರ ವಿಚಾರಕ್ಕೆ ಸಂಬಂಧಿಸಿ ನಾಗರಿಕರು ಈ ಅವಧಿಯಲ್ಲಿ ಸೂಕ್ತ ದಾಖಲೆ ನೀಡಿ, ಸೇರ್ಪಡೆ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.

ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಗೊಳ್ಳುವವರಿಗೆ 2022ರ ಜನವರಿ 1ಕ್ಕೆ 18 ವರ್ಷ ಪೂರ್ಣ ಗೊಂಡಿರಬೇಕು. ಪರಿಷ್ಕರಣೆ ಅಭಿಯಾನ ಸಂದರ್ಭ ವಯಸ್ಸಿನ ದಾಖಲೆ, ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಎಸ್‌.ಎಸ್ ಎಲ್‌ಸಿ ಅಂಕಪಟ್ಟಿ ವಾಸ್ತವ್ಯದ ಬಗ್ಗೆ ದಾಖಲೆ, ಪಡಿತರ ಚೀಟಿ, ವಿದ್ಯುತ್ ಬಿಲ್ ಪಾವತಿ ರಶೀದಿ, ಪಾಸ್‌ಬುಕ್ ಪ್ರತಿ, ಪಾಸ್‌ಪೋರ್ಟ್ ಪ್ರತಿ, ವಾಹನ ಚಾಲನಾ ಪರವಾನಿಗೆ, ಬಾಡಿಗೆ ಕರಾರು ಇನ್ನಿತರ ದಾಖಲೆಗಳು ಮತದಾರರು ಆವಶ್ಯಕವಾಗಿರುತ್ತದೆ. ಆನ್ಲೈನ್, ವೆಬ್ ಪೋರ್ಟಲ್ ಮೂಲಕವು ಪ್ರಕ್ರಿಯೆಗಳನ್ನು ನಡೆಸಬಹುದು. ವಿಶೇಷವಾಗಿ ಶಾಲಾ, ಕಾಲೇಜುಗಳಲ್ಲೂ ಕಾರಕ್ರಮ ನಡೆಯಲಿದೆ. ಎಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!