Thursday, December 2, 2021
spot_img
Homeಸುದ್ದಿಕಾರ್ಕಳ : ಕುಕ್ಕುಂದೂರಿನಲ್ಲಿ ನಿಧಿ ಇದೆ ಎಂದು ನಂಬಿಸಿ ಹಣ ಪಡೆದು ವಂಚನೆ ,ಇಬ್ಬರ ಬಂಧನ

ಕಾರ್ಕಳ : ಕುಕ್ಕುಂದೂರಿನಲ್ಲಿ ನಿಧಿ ಇದೆ ಎಂದು ನಂಬಿಸಿ ಹಣ ಪಡೆದು ವಂಚನೆ ,ಇಬ್ಬರ ಬಂಧನ

ಕಾರ್ಕಳ : ಜಮೀನಿನಲ್ಲಿ ನಿಧಿ ಇದೆ ಎಂದು ಹೇಳಿ ಅದನ್ನು ತೆಗೆದುಕೊಡುವುದಾಗಿ ನಂಬಿಸಿ ಮೋಸ ಮಾಡಿ ಹಣ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಕುಕ್ಕಂದೂರು ದೇವಸ್ಥಾನ ಬಳಿ ವಾಸವಾಗಿರುವ ಕೃಷ್ಣ ನಾಯ್ಕ ಎಂಬವರ ಮನೆಗೆ ಚಿತ್ರದುರ್ಗದ ಕಲ್ಲೇನಹಳ್ಳಿ ನಿವಾಸಿಗಳಾದ ಓಬಯ್ಯ ,ಅಜೇಯ ಎಂಬ ಇಬ್ಬರು ಬಂದು ಜಮೀಮಿನಲ್ಲಿ ನಿಧಿ ಇರುವುದಾಗಿ ಹೇಳಿ ಅದಕ್ಕೆ ಪೂಜೆ ಹೋಮಗಳನ್ನು ಮಾಡಲು 1ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ಕೃಷ್ಣ ನಾಯ್ಕ ಅವರಲ್ಲಿ ಹೇಳಿ 95 ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದು ಉಳಿದ ಹಣವನ್ನು ತೆಗೆದುಕೊಂಡು ಹೋಗಲು ಬಂದಿದ್ದು ಕೃಷ್ಣ ನಾಯ್ಕ್ ರವರ ಮನೆಗೆ ಕಾರಿನಲ್ಲಿ ಬಂದು ಅವರಿಂದ ಉಳಿದ ರೂಪಾಯಿ 5 ಸಾವಿರವನ್ನು ಪಡೆದು ಅವರಿಗೆ ಅವರ ಜಮೀನಿನ ಒಂದು ಮೂಲೆಯಲ್ಲಿ ಗುಂಡಿ ತೋಡಿ ಅದರಿಂದ ಒಂದು ದೇವರ ಮುಖವಾಡ ಮತ್ತು ಹಿತ್ತಾಳೆಯ ಶಂಖ ವನ್ನು ತೆಗೆದು ಕೃಷ್ಣ ನಾಯ್ಕ್ ರವರಿಗೆ ಕೊಟ್ಟು ದೇವರ ಕೋಣೆಯಲ್ಲಿ ಇಡಿ ಎಂದು ಹೇಳಿ ಬಂದ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಅವರ ಈ ನಡವಳಿಕೆಯಿಂದ ಸಂಶಯಗೊಂಡ ಕೃಷ್ಣ ನಾಯ್ಕ ಅವರ ಮಗ ಕೂಡಲೇ ಕಾರ್ಕಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಕಾರ್ಕಳ ನಗರ ಠಾಣಾ ಸಬ್‌ಇನ್ಸ್‌ಪೆಕ್ಟರ್ ಮಧು ಬಿ ಇ ಅವರು ಸಿಬ್ಬಂದಿಗಳೊಂದಿಗೆ ಆರೋಪಿಗಳು ಬಂದ ಕಾರಿನ ಮಾಹಿತಿ ಪಡೆದು ಹುಡುಕಾಡಿದಾಗ ಕಾರು ಮೂಜೂರು ಚಿಕ್ಕಲ್ ಬೆಟ್ಟು ಎಂಬಲ್ಲಿ ನಿಂತಿರುವುದಾಗಿ ಮಾಹಿತಿ ಸಿಕ್ಕಿದ್ದು ಅಲ್ಲಿಗೆ ಹೋಗಿ ನೋಡಿದಾಗ ಇಬ್ಬರು ವ್ಯಕ್ತಿಗಳು ನಿಂತಿದ್ದು ಅವರನ್ನು ವಿಚಾರಿಸಲಾಗಿ ಕೃಷ್ಣ ನಾಯ್ಕ್ ಅವರಿಂದ ರೂಪಾಯಿ 1ಲಕ್ಷ ಹಣವನ್ನು ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದು,ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!