Thursday, December 2, 2021
spot_img
Homeಸುದ್ದಿಆಗುಂಬೆ ಘಾಟ್ ಭೀಕರ ಅಪಘಾತ : ಮೃತಪಟ್ಟ ಕಾರ್ಕಳದ ನಾಲ್ವರ ಗುರುತು ಪತ್ತೆ

ಆಗುಂಬೆ ಘಾಟ್ ಭೀಕರ ಅಪಘಾತ : ಮೃತಪಟ್ಟ ಕಾರ್ಕಳದ ನಾಲ್ವರ ಗುರುತು ಪತ್ತೆ

ಕಾರ್ಕಳ : ಶಿವಮೊಗ್ಗದಿಂದ ಕಾರ್ಕಳ ಬರುತ್ತಿದ್ದ ವೇಳೆ ಆಗುಂಬೆಯ 10 ನೇ ತಿರುವಿನಲ್ಲಿ ಅಪಘಾತಕ್ಕೀಡಾದ ಈಚರ್‌ನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಐವರು ಗಾಯಗೊಂಡಿರುತ್ತಾರೆ. ಮಿಯ್ಯಾರು ಚಂದ್ರಶೇಖರ್‌ ಎಂಬವರಿಗೆ ಸೇರಿದ ಈಚರ್‌ನಲ್ಲಿ ಶಿಕಾರಿಪುರ ತಾಲೂಕಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕಾರ್ಕಳದಿಂದ ಶಿಲೆಯನ್ನು ರವಾನಿಸಲಾಗಿತ್ತು. ಶಿಲೆಯನ್ನು ಅನ್‌ ಲೋಡ್‌ ಮಾಡಲು ತೆರಳಿದ್ದ ಕಾರ್ಕಳ ಮಿಯ್ಯಾರು ಜೋಡುಕಟ್ಟೆ ನಿವಾಸಿ ಮಂಜುನಾಥ್‌ (38), ಮಿಯ್ಯಾರು ಗ್ರಾಮದ ಮಣಿಕಂಠ (37), ಮುರುಗೇಶ್‌ ಹಾಗೂ ಈಚರ್‌ ಚಾಲಕ ಯಜ್ಞೇಶ್‌ (30) ಮೃತಪಟ್ಟಿರುತ್ತಾರೆ. ಐವರು ಗಾಯಾಳುಗಳಲ್ಲಿ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಮನೆಗೆ ತೆರಳಿರುತ್ತಾರೆ.

ಅನ್‌ಲೋಡ್‌ ಮಾಡಲು ತೆರಳಿದ್ದ ಕಾರ್ಮಿಕರಲ್ಲಿ ಶನಿವಾರ ಬಸ್‌ ಮೂಲಕವೇ ಊರಿಗೆ ಬರುವಂತೆ ತಿಳಿಸಿದ್ದರೂ ಶುಕ್ರವಾರ ಈಚರ್‌ನಲ್ಲೇ ಅವರು ವಾಪಸಾಗಿದ್ದರು ಎಂದು ಲಾರಿ ಮಾಲಕ ಚಂದ್ರಶೇಖರ್‌ ನ್ಯೂಸ್‌ ಕಾರ್ಕಳದೊಂದಿಗೆ ದುಃಖ ತೋಡಿಕೊಂಡರು. ಈಚರ್‌ ನಲ್ಲಿ ಚಾಲಕ, ಕ್ಲೀನರ್‌ ಮಾತ್ರವೇ ತೆರಳಿದ್ದು, ಉಳಿದವರು ಬಸ್‌ ಮೂಲಕವೇ ಶಿಕಾರಿಪುರ ತಲುಪಿದ್ದರು.

ಇದೇ ರಸ್ತೆಯಾಗಿ ಸಾಗುತ್ತಿದ್ದ ಉಡುಪಿ ನಗರ ಪೊಲೀಸ್‌ ಠಾಣೆ ನಿರೀಕ್ಷಕ ಪ್ರಮೋದ್‌ ಕುಮಾರ್‌ ಅವರು ಗಾಯಾಳನ್ನು ರಕ್ಷಿಸುವಲ್ಲಿ ನೆರವಾದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!