Tuesday, December 7, 2021
spot_img
Homeಸುದ್ದಿಕಾರ್ಕಳ : ಯಶಸ್ವಿಯಾಯಿತು ಏಕಕಾಲದ ಕನ್ನಡಗೀತ ಗಾಯನ ,ಎಲ್ಲೆಡೆ‌ ಮೊಳಗಿತು ಕನ್ನಡ ಕನ್ನಡ

ಕಾರ್ಕಳ : ಯಶಸ್ವಿಯಾಯಿತು ಏಕಕಾಲದ ಕನ್ನಡಗೀತ ಗಾಯನ ,ಎಲ್ಲೆಡೆ‌ ಮೊಳಗಿತು ಕನ್ನಡ ಕನ್ನಡ

ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದರ ಆಶ್ರಯದಲ್ಲಿ ‘ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ, ಮಾತಾಡ್ ಮಾತಾಡ್ ಕನ್ನಡ’ ವಿಶ್ವದಾದ್ಯಂತ ಏಕ ಕಾಲದ ಕನ್ನಡ ಗೀತ ಗಾಯನ ಕಾರ್ಯಕ್ರಮ ಕಾರ್ಕಳದಾದ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಕಳ ಇತಿಹಾಸ ಪ್ರಸಿದ್ಧ ವೈರಾಗ್ಯ ಮೂರ್ತಿ ಬಹುಬಲಿ ಬೆಟ್ಟದ ಗೋಮಟೇಶ್ವರ ಬಳಿ ಕಾರ್ಕಳ ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಕೆ ಪುರಂದರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಸಂದರ್ಭದಲ್ಲಿ ಕಾರ್ಕಳ ಉಪ ತಹಶೀಲ್ದಾರ್, ಕಂದಾಯ ಅಧಿಕಾರಿ ಶಿವಪ್ರಸಾದ್, ಗ್ರಾಮ ಕರಣಿಕ ರಿಯಾಝ್, ಕಚೇರಿ ಸಹಾಯಕ ಸಿಂಬ್ಬಂದಿ ಮಾಧವ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಪುರಸಭಾ ಸದಸ್ಯರು, ವಿವಿದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಖ್ಯಾತ ಸಾಹಿತಿ ಮುನಿರಾಜ ರೆಂಜಾಳ, ಪುರಸಭಾ ಹಿರಿಯ ಆರೋಗ್ಯಾಧಿಕಾರಿ ಲೈಲಾ ತೋಮಸ್, ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಜಗನ್ನಾಥ ಶೆಟ್ಟಿ, ಬಿಜೆಪಿ ಪಕ್ಷದ ಅಧ್ಯಕ್ಷ ಮಹಾವೀರ್ ಜೈನ್, ಸ್ವಚ್ಛ ಭಾರತ್ ಬ್ರಿಗೇಡ್ ನ ಪದಾಧಿಕಾರಿಗಳು, ಬಿಜೆಪಿ ಮುಖಂಡರಾದ ಪ್ರಕಾಶ ರಾವ್, ನರಸಿಂಹ ಕಾಮತ್, ಪುರಸಭಾ ಸದಸ್ಯರಾದ ಪ್ರದೀಪ್ ಕಾಳಿಕಾಂಬ, ಅವಿನಾಶ್ ಶೆಟ್ಟಿ, ಶಾಲಾ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಕಾರ್ಕಳದ ಸಚಿವರ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರಸಿದ್ಧ ಗಾಯಕ ಯೋಗಿಶ್ ಕಿಣಿಯವರ ಮಧುರ ಕಂಠಕ್ಕೆ ಸಾಥ್ ನೀಡಿದ ಸಂಗೀತ ನಿರ್ದೇಶಕರಾದ ಮೋಹನ್ ಕಾರ್ಕಳ,ರಾಜೇಂದ್ರ, ಕಾರ್ಕಳ ತಾಲೂಕು ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಕುಕ್ಕುಂದೂರು ಗ್ರಾ.ಪಂ.ಅಧ್ಯಕ್ಷ, ಸದಸ್ಯರು, ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು, ಹಾಡುಗಾರರು ಸಂಗೀತದ ರಸದೌತಣ ಉಣ ಬಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸ್ಥಾಯಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಸುಮಿತ್ ಶೆಟ್ಟಿ, ಸದಸ್ಯರಾದ ರೇಷ್ಮಾ ಶೆಟ್ಟಿ, ಕಾರ್ಕಳ ಬಿಜೆಪಿ ಅಧ್ಯಕ್ಷ ಅನಂತ ಕೃಷ್ಣ ಶೆಣೈ, ನವೀನ್ ನಾಯ್ಕ,ಜಯರಾಮ ಸಾಲ್ಯಾನ್,ಪ್ರಸಾದ್ ಐಸಿರ,ಯೋಗೀಶ್ ಸಾಲ್ಯಾನ್, ರಾಕೇಶ್ ಶೆಟ್ಟಿ, ಭರತ್ ಶೆಟ್ಟಿ, ಯುವರಾಜ್ ಶೆಟ್ಟಿ ,ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕುಮಾರ್, ಉಪಸ್ಥಿತರಿದ್ದರು.

ಕಾರ್ಕಳ ಬಸ್ ನಿಲ್ದಾಣ, ಸುಮೇಧ ಪ್ಯಾಶನ್ ಇನ್ಸಿಟ್ಯೂಟ್, ಇತರ ಶಾಲೆ, ಕಾಲೇಜುಗಳಲ್ಲಿ ಸುಗಮವಾಗಿ ಸಂಗೀತದ ಸಾಲುಗಳು ಹರಿದು ಬಂದವು. ಹಲವಾರು ಸಂಘ ಸಂಸ್ಥೆಗಳು, ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡವು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!