Thursday, December 2, 2021
spot_img
Homeಸುದ್ದಿಮಾತೃಭಾಷೆ ಕನ್ನಡ ನಮ್ಮ ಜೀವದ್ಭಾಷೆಯಾಗಿದೆ ಡಾ ಜಗದೀಶ್ ಪೈ

ಮಾತೃಭಾಷೆ ಕನ್ನಡ ನಮ್ಮ ಜೀವದ್ಭಾಷೆಯಾಗಿದೆ ಡಾ ಜಗದೀಶ್ ಪೈ

ಕಾರ್ಕಳ : ಮಾತೃಭಾಷೆ ನಮ್ಮ ಜೀವಧ್ಭಾಷೆಯಾಗಲಿ ಮಾತೃ ಭಾಷೆಯ ಮೇಲಿನ ಅಭಿಮಾನ ಆ ನಾಡಿನ ಸಂಸ್ಕೃತಿಯ ಪ್ರತೀಕ. ಬ್ರಿಟಿಷರು ದೇಶ ಬಿಟ್ಟು ಹೋದರೂ ನಾವು ಆಂಗ್ಲ. ಭಾಷೆಯ ಮೇಲಿನ ಅತೀಯಾದ ವ್ಯಾಮೋಹವನ್ನು ಬಿಡದಿರುವುದು ಖೇದಕರ ಸಂಗತಿ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ ಜಗದೀಶ್ ಪೈ ನುಡಿದರು.


ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಕಾರ್ಕಳ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಆಯೋಜಿಸಿದ ಶುದ್ಧ ಕನ್ನಡದಲ್ಲಿ ನಿರ್ಗಳವಾಗಿ ಮಾತಾಡಿ ಸ್ವರ್ಧೆಯ ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಮಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಶ್ರೀ ಕೊಂಡಳ್ಳಿ. ಪ್ರಭಾಕರ್ ಶೆಟ್ಟಿ ಮಾತಾಡಿ ಸಾವಿರ ಸೌದೆಯು ಉರಿದಾಗ ಕಾಣುವ ಬೆಂಕಿಗಿಂತಲೂ ಒಂದು ದೀಪದ ಬೆಳಕೇ ಶ್ರೇಷ್ಟ ವಾದು ಅಂತೆಯೇ ನಾವು ಎಷ್ಟೇ ಭಾಷೆಯ ಬಗ್ಗೆ ತಿಳಿದಿದ್ದರೂ ಮಾತನಾಡಿದರೂ ಮಾತೃಭಾಷೆಯ ಸೊಗಡು ಅಭಿಮಾನ ಅದು ಮಾತೃತ್ವದ ಶಕ್ತಿ ಮತ್ತು ಪ್ರೀತಿಯಂತೆ ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮದ್ ಭುವನೇಂದ್ರ ವಿದ್ಯಾಸಂಸ್ಥೆ ಯ ಆಡಳಿತ ಮಂಡಳಿಯ ಆಧ್ಯಕ್ಷ ಶ್ರೀ ಕೆ ವಾಮನ ಕಾಮತ್ ವಹಿಸಿ, ಕನ್ನಡ ನಾಡು ನುಡಿ ಹಾಗೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಓದಿದ ಕನ್ನಡ ಪಠ್ಯಪುಸ್ತಕದಲ್ಲಿನ ಹಾಡು.ನೆನಪಿಸಿಕೊಂಡು ಹಾಡು ಹಾಡಿದರು.

ವೇದಿಕೆಯಲ್ಲಿ ಶಾಲಾ ಸಂಚಾಲಕ ಶ್ರೀ ಎಸ್ ನಿತ್ಯಾನಂದ ಪೈ ಉಪಸ್ಥಿತರಿದ್ದರು. ಭುವನೇಂದ್ರ. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀ ಮತಿ ವೃಂದಾ ಶೆಣೈ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಗಣೇಶ್. ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಪೂರ್ಣಿಮಾ ಶೆಣೈ ಧನ್ಯವಾದ ವಿತ್ತರು. ಶಿಕ್ಷಕ ಆರ್ ನಾರಾಯಣ ಶೆಣೈ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ತೀರ್ಪು ಗಾರರಾಗಿ ಶಾರೀರಿಕ ಶಿಕ್ಷಣ. ಶಿಕ್ಷಕ ಶ್ರೀ ಸಂಜಯ ಕುಮಾರ್ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಶೆಣೈ ಶಿಕ್ಷಕಿ ಸೀಮಾ ಕಾಮತ್ ಸಹಕರಿಸಿದರು.ಈ ಸ್ಪರ್ಧೆಯಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ ಕಾರ್ಕಳ ಎಸ್ ವಿ ಟಿ ಆಂಗ್ಲ. ಮಾಧ್ಯಮ ಪ್ರೌಢ ಶಾಲೆ ಕಾರ್ಕಳ ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜು ಟಾರ್ಕಳ ಶ್ರೀ. ಭಃವನೇಂದ್ರ ಪದವಿ ಕಾಲೇಜು ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಗೀತಾಗಾಯನವೂ ನಡೆಯಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!