Tuesday, December 7, 2021
spot_img
HomeUncategorizedಜಾತಿ ಮೆಟ್ಟಿ ನಿಂತ ಪ್ರೀತಿ | ಬಂಟ್ವಾಳದ ಹವ್ಯಕ ಕುಟುಂಬದ ಸೊಸೆಯಾದ ಮಲ್ಲಿಕಾರ್ಜುನ ಖರ್ಗೆ ಮೊಮ್ಮಗಳು

ಜಾತಿ ಮೆಟ್ಟಿ ನಿಂತ ಪ್ರೀತಿ | ಬಂಟ್ವಾಳದ ಹವ್ಯಕ ಕುಟುಂಬದ ಸೊಸೆಯಾದ ಮಲ್ಲಿಕಾರ್ಜುನ ಖರ್ಗೆ ಮೊಮ್ಮಗಳು

ಕಾರ್ಕಳ : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕರಾವಳಿಯ ಹವ್ಯಕ ಬ್ರಾಹ್ಮಣರ ಜೊತೆ ಸಂಬಂಧ ಬೆಳೆಸಿದ್ದಾರೆ. ದಲಿತ ಸಮುದಾಯದ ಖರ್ಗೆಯವರ ಮೊಮ್ಮಗಳ ವಿವಾಹ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಹವ್ಯಕ ಬ್ರಾಹ್ಮಣ ಯುವಕನ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಲೋಕಸಭೆಯ ಪ್ರತಿಪಕ್ಷದ ನಾಯಕ ಖರ್ಗೆ ಹವ್ಯಕ ಬ್ರಾಹ್ಮಣರ ಮನೆಯ ಬೀಗರಾಗಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರ ಪುತ್ರಿ ಜಯಶ್ರೀ ಮತ್ತು ರಾಧಾಕೃಷ್ಣ ದಂಪತಿಯ ಪುತ್ರಿ ಪ್ರಾರ್ಥನಾರನ್ನು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಗಿಲ್ಕಿಂಜಿ ಮನೆಯ ಕುಟುಂಬದ ಯುವಕ ಪಾಣಿನಿ ಭಟ್ ವರಿಸಿದ್ದಾರೆ.ಗಿಲ್ಕಿಂಜಿ ಮನೆಯ ಎ.ಟಿ.ಹರಿಶಂಕರ ಮತ್ತು ವಿಜಯಲಕ್ಷ್ಮೀ ದಂಪತಿಯ ಪುತ್ರ ಪಾಣಿನಿ ಭಟ್ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದಾರೆ.

ಪಾಣಿನಿ ಭಟ್ ಮತ್ತು ಪ್ರಾರ್ಥನಾ ಒಂದೇ ಕಂಪನಿಯಲ್ಲಿ ಕೆಲಸಕ್ಕಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ವಿಷಯವನ್ನು ಎರಡೂ ಕುಟುಂಬಗಳಿಗೆ ತಿಳಿಸಿ, ಮದುವೆಗೆ ಒಪ್ಪಿಸಿದ್ದಾರೆ. ದಲಿತ ವರ್ಗದ ಹುಡುಗಿಯನ್ನು ಹವ್ಯಕ ಬ್ರಾಹ್ಮಣ ಕುಟುಂಬದ ಸೊಸೆಯಾಗಿ ಸ್ವೀಕರಿಸಿದ್ದು ಎರಡೂ ಕುಟುಂಬಗಳ ಸಮ್ಮತಿಯಿಂದ ಅದ್ದೂರಿಯಿಂದ ಮದುವೆ ಕಾರ್ಯ ಜರುಗಿದೆ.

ಮದುವೆ ಸಮಾರಂಭದಲ್ಲಿ ಕಾಂಗ್ರೆಸ್ ಪ್ರಮುಖರಾದ ವೀರಪ್ಪ ಮೊಯ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೀವಾಲ, ಕೆಪಿಸಿಸಿ ಅದಕ್ಕೆ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾಜಿ ಸಚಿವ ಡಾ.ಜಿ ಪರಮೇಶ್ವರ್, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!