ಶಿರ್ಲಾಲು ಪ್ರೌಢಶಾಲಾ ವಿಭಾಗ ವಿದ್ಯಾರ್ಥಿ ಸಂಘ | ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನಡೆಯಿತು ಆಯ್ಕೆ ಪ್ರಕ್ರಿಯೆ

ಕಾರ್ಕಳ : ಶಿರ್ಲಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಸತ್ತಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯನ್ನು ಅಣಕು ಮತದಾನದ ಮೂಲಕ ನಡೆಸಲಾಯಿತು.

ವಿದ್ಯಾರ್ಥಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಈ ಚುನಾವಣೆಯಲ್ಲಿ ವಿದ್ಯಾರ್ಥಿ ಸರಕಾರದ ಮುಖ್ಯಮಂತ್ರಿಯಾಗಿ ಮಹಮ್ಮದ್ ಫಯಾಜ್ ಹಾಗೂ ಉಪಮುಖ್ಯಮಂತ್ರಿಯಾಗಿ ಸುಜನ್ ಎಸ್. ಆಯ್ಕೆಯಾದರು.

ನಂತರ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಸರಕಾರದ ಪ್ರತಿನಿಧಿಗಳಿಗೆ ಪ್ರಮಾಣ ವಚನವನ್ನು ಸಹಶಿಕ್ಷಕಿ ಶ್ರೀಮತಿ ಸುಮಾಮಣಿ. ಜಿ ಬೋಧಿಸಿದರು.

ಮುಖ್ಯಶಿಕ್ಷಕ ಶ್ರೀ ನರಸಿಂಹ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಶಿಕ್ಷಕ ಸತೀಶ್ ವಡ್ಡರ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿಶ್ವನಾಥ್ ನಾಯಕ್ ಮಾರ್ಗದರ್ಶನ ನೀಡಿ, ಶಿಕ್ಷಕಿ ಮಹಾಲಕ್ಷ್ಮಿ ಎಂ ಚುನಾವಣೆ ಕಾರ್ಯಕ್ಕೆ ಸಹಕರಿಸಿದರು. ಶಿಕ್ಷಕ ಬಾಳಪ್ಪ ಶೇಕುಗೋಳ ವಂದಿಸಿದರು. ಶಿಕ್ಷಕ ನಾರಾಯಣ ಪೂಜಾರಿ.ಎನ್ ಕಾರ್ಯಕ್ರಮ ನಿರೂಪಿಸಿದರು.





























































































































































































































error: Content is protected !!
Scroll to Top