Tuesday, December 7, 2021
spot_img
Homeಸ್ಥಳೀಯ ಸುದ್ದಿನ. 4 : ಬಸ್‌ ಏಜೆಂಟರ ಬಳಗದ 20ನೇ ವಾರ್ಷಿಕೋತ್ಸವ

ನ. 4 : ಬಸ್‌ ಏಜೆಂಟರ ಬಳಗದ 20ನೇ ವಾರ್ಷಿಕೋತ್ಸವ

ಸೌಹಾರ್ದ ಸಂಗಮ-ಸನ್ಮಾನ ಸಮಾರಂಭ

ಶಿವದೂತೆ ಗುಳಿಗ ಪ್ರದರ್ಶನ

ಕಾರ್ಕಳ : ಬಸ್‌ ಏಜೆಂಟರ ಬಳಗ ಕಾರ್ಕಳ ಇದರ 20ನೇ ವಾರ್ಷಿಕೋತ್ಸವ ನ. 4ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧಾನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಎಸ್‌ವೈಎಸ್‌ ರಾಜ್ಯ ಕಾರ್ಯದರ್ಶಿ ಡಾ. ಎಂ.ಎಸ್‌.ಎಂ. ಅಬ್ದುಲ್‌ ರಶೀದ್‌ ಝೈನಿ ಕಾಮೀಲ್‌ ಸಖಾಫಿ, ಅತ್ತೂರು ಸೈಂಟ್‌ ಲಾರೆನ್ಸ್‌ ಶಿರಿನ್‌ ಬಸಿಲಿಕ ಇಲ್ಲಿನ ಧರ್ಮಗುರು ವಂ. ಫಾ. ಅಲ್ಬನ್ ಡಿ’ಸೋಜಾ ಶುಭಹಾರೈಸಲಿದ್ದಾರೆ.

ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಪುರಸಭಾ ಮುಖ್ಯಾಧಿಕಾರಿ ರೂಪ ಟಿ. ಶೆಟ್ಟಿ, ಸಾಹಿತಿ ಮುನಿರಾಜ ರೆಂಜಾಳ, ಲಯನ್ಸ್‌ ಕ್ಲಬ್‌ ಕಾರ್ಕಳ ರಾಜೇಶ್ ಶೆಣೈ, ರೋಟರಿ ಕ್ಲಬ್‌ ಕಾರ್ಕಳ ಅಧ್ಯಕ್ಷ ಸುರೇಶ್ ನಾಯಕ್, ಉದ್ಯಮಿ ಗಣೇಶ್ ಶೆಟ್ಟಿ, ಜೇಸಿಸ್‌ ಆಂಗ್ಲ ಮಾಧ್ಯಮ ಶಿಕ್ಷಕಿ ವಂದನಾ ರೈ, ಆನೆಕೆರೆ ಚೇತನ ಶಾಲೆಯ ಚಿತ್ರ ಕಲಾವಿದೆ ಅದಿತಿ ಶೆಟ್ಟಿ ಉಪಸ್ಥಿತರಿರುವರು ಎಂದು ಬಸ್‌ ಏಜೆಂಟ್‌ ಬಳಗದ ಅಧ್ಯಕ್ಷ ಬಾಬು ಮೂಲ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿವದೂತೆ ಗುಳಿಗ ಪ್ರದರ್ಶನ
ರಾತ್ರಿ ಗಂಟೆ 8 ಗಂಟೆಯಿಂದ ವಿಜಯ ಕುಮಾರ್ ಕೊಡಿಯಾಲ್‌ಬೈಲು ಅವರಿ೦ದ ವಿಭಿನ್ನ ಶೈಲಿಯ ತುಳು ನಾಟಕ ನಾಟಕ ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!