Tuesday, December 7, 2021
spot_img
Homeಸ್ಥಳೀಯ ಸುದ್ದಿಕಾರ್ಕಳದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಧಾನಿ ಮನ್‌ ಕಿ ಬಾತ್‌ ವೀಕ್ಷಣೆ

ಕಾರ್ಕಳದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಧಾನಿ ಮನ್‌ ಕಿ ಬಾತ್‌ ವೀಕ್ಷಣೆ

ಕಾರ್ಕಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅ. 24ರಂದು ಪುರಸಭಾ ವ್ಯಾಪ್ತಿಯ 12ನೇ ವಾರ್ಡ್‌ನಲ್ಲಿ ಪುರಸಭಾ ನಾಮನಿರ್ದೇಶಿತ ಸದಸ್ಯ ಪ್ರಸನ್ನ ಕಾರ್ಲ ಅವರ ಮನೆಯಲ್ಲಿ ಪ್ರಧಾನಿ ಮಂತ್ರಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮ ವೀಕ್ಷಿಸಿದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಬಿಜೆಪಿ ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ಪುರಸಭಾ ಸದಸ್ಯರಾದ ಭಾರತಿ ಅಮೀನ್‌, ಪ್ರದೀಪ್‌ ಮಾರಿಗುಡಿ, ಅವಿನಾಶ್‌ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಮುದಾಯ ಭವನಕ್ಕೆ ಅನುದಾನದ ಭರವಸೆ
ಪುರಸಭೆಯ 11ನೇ ವಾರ್ಡಿನ ಶಿವಭಕ್ತ ಭಜನಾ ಮಂಡಳಿಗೆ ಭೆಟಿ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮುದಾಯ ಭವನ ನಿರ್ಮಾಣ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. ಬಳಿಕ 11ನೇ ವಾರ್ಡ್‌ ಬೂತ್‌ ಅಧ್ಯಕ್ಷ ದಿನೇಶ್‌ ಪೂಜಾರಿ ಕಾವೇರಡ್ಕ ಅವರ ಮನೆಗೆ ಭೇಟಿ ನೀಡಿ ಸಚಿವರು ನಾಮಫಲಕ ಅಳವಡಿಸಿದರು. ಈ ಸಂದರ್ಭ ಗೇರು ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!