Tuesday, December 7, 2021
spot_img
HomeUncategorizedಕಾರ್ಕಳ : ಸ್ತನ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಗಾರ

ಕಾರ್ಕಳ : ಸ್ತನ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಗಾರ

ಕಾರ್ಕಳ ಶಾರದಾ ಮಹಿಳಾ ಮಂಡಲ, ಅನಂತಶಯನ ವತಿಯಿಂದ ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಕ್ರಮ
ನಡೆಯಿತು.

ಅಕ್ಟೋಬರ್ ತಿಂಗಳನ್ನು ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆಯಾಗಿ ಆಚರಿಸಲಾಗುತ್ತದೆ.

ಮಾಹಿತಿ ಕಾರ್ಯಗಾರದಲ್ಲಿ ಕಾರ್ಕಳದ
ಸರಕಾರಿ ಅಸ್ಪತ್ರೆಯ ಖ್ಯಾತ ರೇಡಿಯೊಲಜಿಸ್ಟ್ ಡಾ.ಅನಿತಾ ಪ್ರಭು ಅವರು ಸ್ತನ ಕ್ಯಾನ್ಸರ್‌ ಆರಂಭದಲ್ಲಿ ಗುರುತಿಸುವುದು ಹೇಗೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ, 40 ವರ್ಷದ ನಂತರ ಮಹಿಳೆಯರು ಕಡ್ಡಾಯವಾಗಿ ಮೆಮೊಗ್ರಾಫಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ, ರೋಗ ಪತ್ತೆ ಹಾಗೂ ಚಿಕಿತ್ಸೆ ಸುಲಭವೆಂದು ವೈದ್ಯರು ಕಿವಿಮಾತು ಹೇಳಿದರು.

ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ವಾರಿಜಾ ಕಾಮತ್ ಸ್ವಾಗತಿಸಿ,ಶಾಂತಲಾ ಫಾಟಕ್ ,ಸೀಮಾ ಶೆಟ್ಟಿ ,ಪ್ರಾರ್ಥಿಸಿ,
ಉಮಾ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿದರು.

ವಿನಯಾ ಫಾಟಕ್ ರವರು ಡಾ ಅನಿತಾ ಪ್ರಭುರವರ ಪರಿಚಯ ಮಾಡಿದರು.

ಸಾಧನಾ ಅಶ್ರಿತ್ ರವರು ವಂದಿಸಿದರು . ಉಪಾಧ್ಯಕ್ಷೆ ಉಮಾ ಚಿಪ್ಳುಣಕರ್ ಹಾಗೂ ಕಾರ್ಯದರ್ಶಿ ಡಾ.ಹರ್ಷಾ ಕಾಮತ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಂಡಳಿಯ ಸದಸ್ಯೆ,ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ವಿಜೇತೆ ಶ್ರೀಮತಿ ಸಾಧನಾ ಜಿ. ಆಶ್ರೀತ್ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!