Tuesday, December 7, 2021
spot_img
HomeUncategorizedಕಾರ್ಕಳ : ಹೊಂಡ-ಗುಂಡಿಗಳಿಂದ ಕೂಡಿದ ನಗರದ ರಸ್ತೆ, ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ

ಕಾರ್ಕಳ : ಹೊಂಡ-ಗುಂಡಿಗಳಿಂದ ಕೂಡಿದ ನಗರದ ರಸ್ತೆ, ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ

ಕಾರ್ಕಳ : ಇಲ್ಲಿನ ಪುರಸಭೆಯ ವ್ಯಾಪ್ತಿಗೆ ಒಳಪಟ್ಟ ಕಾರ್ಕಳ ಪೇಟೆಯೊಳಗಿನ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ ಆಗುತ್ತಿದೆ ಹಾಗೂ ರಸ್ತೆಯ ದುರಾವಸ್ಥೆಯನ್ನು ಖಂಡಿಸಿ ಕಾರ್ಕಳ ಬ್ಲಾಕ್‌ ಕಾಂಗ್ರೆಸ್ ಸಮಿತಿ, ಕಾರ್ಕಳ ನಗರ ಕಾಂಗ್ರೆಸ್, ಕಾರ್ಕಳ ಯುವ ಕಾಂಗ್ರೆಸ್ ವತಿಯಿಂದ ಹೊಂಡ-ಗುಂಡಿಗಳಿರುವ ನಗರದ ರಸ್ತೆಯಲ್ಲಿ ಬೈಕ್ ರ‍್ಯಾಲಿ ನಡೆಸಿ, ಗೆದ್ದವರಿಗೆ ಟ್ರೋಫಿ, ನೋವು ನಿವಾರಣೆಯ ಮುಲಾಮು ವಿತರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹಲವಾರು ಮಂದಿ ಸ್ಪರ್ಧೆಯಲ್ಲಿ ಬೈಕ್ ನೊಂದಿಗೆ ಭಾಗವಹಿಸಿದರು. ನಗರದ ರಸ್ತೆಗಳಲ್ಲಿ ಇಂತಹ ದೊಡ್ಡ ಸಮಸ್ಯೆಯಿದ್ದರೂ ಬಿಜೆಪಿ ಆಡಳಿತದ ಪುರಸಭೆ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸದೆ ಇರುವುದನ್ನು ಖಂಡಿಸಿದ ಕಾಂಗ್ರೆಸ್ ಪ್ರಮುಖರು ,ಆಡಳಿತದ ನಡೆಯ ವಿರುದ್ದ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!