Thursday, December 2, 2021
spot_img
Homeವಿದೇಶತಾಲಿಬಾನಿಗಳ ಅಟ್ಟಹಾಸ : ಮಹಿಳಾ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ

ತಾಲಿಬಾನಿಗಳ ಅಟ್ಟಹಾಸ : ಮಹಿಳಾ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ

ಕಾಬೂಲ್: ತಾಲಿಬಾನಿಗಳ ತೆಕ್ಕೆಗೆ ಸಿಕ್ಕ‌ಮೇಲೆ ಅಫ್ಘಾನಿಸ್ತಾನದಲ್ಲಿ ಸಾಲು ಸಾಲು ಕೃತ್ಯಗಳು ನಡೆಯುತ್ತಿವೆ.
ಇದೀಗ ವಾಲಿಬಾಲ್ ತಂಡದ ಆಟಗಾರ್ತಿಯನ್ನು
ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಅಫ್ಘಾನಿಸ್ತಾನ ಜ್ಯೂನಿಯರ್ ತಂಡದಲ್ಲಿ ಆಡುತ್ತಿದ್ದ ಮೆಹಜಬೀನ್ ಹಕಿಮಿ ಹತ್ಯೆಗೀಡಾದ ಆಟಗಾರ್ತಿ ಎಂದು ವರದಿ ತಿಳಿಸಿದೆ.
ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವಂತಿಲ್ಲ ಎಂದು ನಿಯಮ ರೂಪಿಸಲಾಗಿದೆ. ತರಬೇತುದಾರರೊಬ್ಬರು, ಅಕ್ಟೋಬರ್ ತಿಂಗಳ ಆರಂಭದಲ್ಲಿ ಮೆಹಜಬೀನ್ ಹಕಿಮಿ ಎಂಬ ಫುಟ್ಬಾಲ್ ಆಟಗಾರ್ತಿಯನ್ನು ತಾಲಿಬಾನಿಗಳು ಶಿರಚ್ಛೇದ ಮಾಡಿದ್ದಾರೆ. ಕುಟುಂಬಕ್ಕೆ ಬೆದರಿಕೆ ಹಾಕಿದ್ದ ಕಾರಣ ಈ ವಿಚಾರ ಯಾರಿಗೂ ತಿಳಿದಿಲ್ಲ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಆಕೆಯ ಶಿರಚ್ಛೇದ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸದ್ಯ ಈ ವಿಚಾರವನ್ನು ತರಬೇತುದಾರರೊಬ್ಬರು ಹೇಳಿದ್ದು, ಈಗಾಗಲೇ ಹಲವು ಮಹಿಳಾ ಆಟಗಾರ್ತಿಯರು ಅಫ್ಘಾನ್’ ತೊರೆದಿದ್ದಾರೆ ಎಂದು ವರದಿ ತಿಳಿಸಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!