Thursday, December 2, 2021
spot_img
Homeಸ್ಥಳೀಯ ಸುದ್ದಿಪ್ರಧಾನಿಯಾಗಿ ರಾಜೀವ್ ಗಾಂಧಿ ಆಳ್ವಿಕೆ ಸುವರ್ಣ ಯುಗ ಎಂದ ವೀರಪ್ಪ ಮೊಯ್ಲಿ

ಪ್ರಧಾನಿಯಾಗಿ ರಾಜೀವ್ ಗಾಂಧಿ ಆಳ್ವಿಕೆ ಸುವರ್ಣ ಯುಗ ಎಂದ ವೀರಪ್ಪ ಮೊಯ್ಲಿ

ಹೈದರಾಬಾದ್: ದಿವಂಗತ ರಾಜೀವ್ ಗಾಂಧಿಯವರ ಐದು ವರ್ಷಗಳ ಪ್ರಧಾನ ಮಂತ್ರಿ ಅಧಿಕಾರಾವಧಿಯನ್ನು  (1984-1989) ಭಾರತದ ಸುವರ್ಣ ಯುಗ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಂಗಳವಾರ ಬಣ್ಣಿಸಿದ್ದಾರೆ.

ಚಾರ್ ಮಿನಾರ್ ನಲ್ಲಿ ನಡೆದ ಸದ್ಭಾವನಾ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ತಮ್ಮ ಜೀವನವನ್ನೇ ರಾಷ್ಟ್ರಕ್ಕಾಗಿ ಮುಡಿಪಿಟ್ಟರು. ಅಸ್ಸಾಂ, ತ್ರಿಪುರಾ, ತಮಿಳುನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಏಕಾಂಗಿಯಾಗಿ ಪರಿಹರಿಸಿದ್ದರು ಎಂದು ಮೊಯ್ಲಿ ವಿವರಿಸಿದರು.

ರಾಜೀವ್ ಗಾಂಧಿ ಆಳ್ವಿಕೆಯ ಲಕ್ಷಣಗಳೆಂದರೆ ಅಭಿವೃದ್ಧಿ, ಏಕತೆ, ಶಾಂತಿ ಮತ್ತು ಕೋಮು ಸೌಹಾರ್ದತೆ. ಅವರು ರಾಜಕೀಯದಲ್ಲಿ ನೈತಿಕ ಮೌಲ್ಯಗಳಿಗೆ ಬೆಲೆ ಕೊಡುತ್ತಿದ್ದರು, 2023 ರಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪುನರಾಗಮನವನ್ನು ಮಾಡಲಿದೆ ಎಂದು ಮೊಯ್ಲಿ ಭವಿಷ್ಯ ನುಡಿದರು.

ರಾಜೀವ್ ಗಾಂಧಿಯವರ ಸದ್ಭಾವನಾ ಯಾತ್ರೆಯ ನೆನಪಿಗಾಗಿ ಸದ್ಭಾವನಾ ದಿವಸ್  ಕಾರ್ಯಕ್ರಮ ನಡೆಸಲಾಗುತ್ತದೆ. ಸಮಾಜದ ವಿವಿಧ ವಿಭಾಗಗಳಲ್ಲಿ ಸೌಹಾರ್ದತೆಯನ್ನು ಉತ್ತೇಜಿಸಲು ಅವಳಿ ನಗರದಲ್ಲಿ 31 ವರ್ಷಗಳ ಹಿಂದೆ ಇದನ್ನು ಆರಂಭಿಸಲಾಯಿತು. ವೀರಪ್ಪ ಮೊಯ್ಲಿ ಅವರಿಗೆ ಸದ್ಭಾವನಾ ಪ್ರಶಸ್ತಿ ನೀಡಲಾಯಿತು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!