Tuesday, December 7, 2021
spot_img
Homeಸ್ಥಳೀಯ ಸುದ್ದಿಕಾರ್ಕಳ ತಾ.ಪಂ. ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಕಾರ್ಕಳ ತಾ.ಪಂ. ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ರಾಮಾಯಣ ಅರಿತುಕೊಂಡಲ್ಲಿ ಅಭ್ಯುದಯ- ಸುಶಾಂತ್‌ ಸುಧಾಕರ್‌

ಕಾರ್ಕಳ : ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಅ. 20ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಎಪಿಎಂಸಿ ಅಧ್ಯಕ್ಷ ರತ್ನಾಕರ್‌ ಅಮೀನ್‌ ಕಾರ್ಯಕ್ರಮ ಉದ್ಘಾಟಿಸಿದರು. ಸಾಮಾಜಿಕ ಚಿಂತಕ ಸುಶಾಂತ್‌ ಸುಧಾಕರ್‌ ಉಪನ್ಯಾಸ ನೀಡಿ, ಧಾರ್ಮಿಕ ಹಾಗೂ ದಾರ್ಶನಿಕ ಅಂಶಗಳನ್ನು ಒಳಗೊಂಡಿರುವ ರಾಮಾಯಣ ಪ್ರೀತಿ, ವಿಶ್ವಾಸ, ಭಕ್ತಿ, ಶ್ರದ್ಧೆ, ನಂಬಿಕೆ, ಸತ್ಯಗಳ ಕಥೆ. ಇತಿಹಾಸ ಕಾವ್ಯಂಶಗಳನ್ನು ಸುಂದರವಾಗಿ ಸಮನ್ವಯಗೊಳಿಸಿದ ಕಥೆ ರಾಮಾಯಣ. ಇದು ಆದಿಕವಿ, ವಿಶ್ವಕವಿ ಜಗತ್ತಿಗೆ ನೀಡಿದ ಅನರ್ಘ್ಯ ರತ್ನ. ಆದಿಕವಿ ವಾಲ್ಮೀಕಿ ಮಹರ್ಷಿಯನ್ನು ನೆನೆಪಿಸಿಕೊಳ್ಳುವುದು ಅಗತ್ಯ. ಇದು ಮಾನವನ ಉದ್ಧಾರಕ್ಕೆ, ಅಭ್ಯುದಯಕ್ಕೆ ಅವಶ್ಯ ಎಂದರು.

ಎಪಿಎಂಸಿ ಅಧ್ಯಕ್ಷ ರತ್ನಾಕರ್‌ ಅಮೀನ್‌ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಯಡಿಯೂರಪ್ಪ ಸರಕಾರ 2011ರಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ತರುವ ಮೂಲಕ ಇಡೀ ರಾಜ್ಯ ವಾಲ್ಮೀಕಿಯನ್ನು ಸ್ಮರಿಸುವಂತಾಯಿತು. ಜಗತ್ತಿನ 10 ಶ್ರೇಷ್ಠ ಕೃತಿಗಳಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣವೂ ಒಂದು. ಸಜ್ಜನರ ಸಹವಾಸದಿಂದ ಬೇಡನಾಗಿದ್ದರೂ ಹೇಗೆ ಬದಲಾಗಿ ಉತ್ತಮನಾದ ಎನ್ನುವುಕ್ಕೆ ವಾಲ್ಮೀಕಿ ಉತ್ತಮ ನಿದರ್ಶನವೆಂದರು.

ತಹಶೀಲ್ದಾರ್‌ ಕೆ. ಪುರಂದರ, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ತಾಲೂಕು ಪಂಚಾಯತ್‌ ಆಡಳಿತಾಧಿಕಾರಿ ಪ್ರತಿಭಾ ಆರ್., ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಎಂ.ಎನ್‌. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್. ವಿಜಯ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!