Tuesday, December 7, 2021
spot_img
Homeಸ್ಥಳೀಯ ಸುದ್ದಿಅಯೋಧ್ಯಾ ನಗರ - ಕಾವೇರಡ್ಕ ಕಿಂಡಿ ಅಣೆಕಟ್ಟುವಿನಿಂದ ಹೊಳೆಗೆ ಬಿದ್ದ ಟೆಂಪೋ

ಅಯೋಧ್ಯಾ ನಗರ – ಕಾವೇರಡ್ಕ ಕಿಂಡಿ ಅಣೆಕಟ್ಟುವಿನಿಂದ ಹೊಳೆಗೆ ಬಿದ್ದ ಟೆಂಪೋ

ಟೆಂಪೋದಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರು

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ 11 ನೇ ವಾರ್ಡ್ ಅಯೋಧ್ಯಾ ನಗರ- ಕಾವೇರಡ್ಕ ದುರ್ಗಾ ರಸ್ತೆ ಕಿಂಡಿ ಅಣೆಕಟ್ಟು ಮೇಲಿನಿಂದ ಟೆಂಪೋವೊಂದು ಮಗುಚಿ ಬಿದ್ದ ಘಟನೆ ಅ. 18ರ ಸಂಜೆ ಸಂಭವಿಸಿದೆ. ಬೀಡಿ ಕಂಪೆನಿಗೆ ಸೇರಿದ ಟೆಂಪೋ ಇದಾಗಿದ್ದು, ಬೀಡಿ ಎಲೆ ಮತ್ತು ತಂಬಾಕು ನೀರುಪಾಲಾಗಿದೆ. ಟೆಂಪೋ ಚಾಲಕ ಸೇರಿದಂತೆ ಇಬ್ಬರು ಟೆಂಪೋದಲ್ಲಿದ್ದು, ಯಾವುದೇ ಪ್ರಾಣಾಪಾಯ ಇಲ್ಲದೇ ಪಾರಾಗಿದ್ದಾರೆ. ನಿನ್ನೆ ಮಳೆ ಇದ್ದ ಕಾರಣ ಹೊಳೆಯಲ್ಲಿ ನೀರು ಹರಿಯುತ್ತಿತ್ತು. ನೀರು ಇಲ್ಲದೇ ಇರುತ್ತಿದ್ದಲ್ಲಿ ಅಥವಾ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ಪ್ರಾಣಕ್ಕೆ ಕುತ್ತಲಾಗುತ್ತಿತ್ತು. ಹಿಂದು ಜಾಗರಣ ವೇದಿಕೆಯ ರಾಜೇಶ್ ಪುಜಾರಿ ಕಾವೇರಡ್ಕ ಮತ್ತವರ ತಂಡ ಟೆಂಪೋವನ್ನು ಮೇಲೆತ್ತಲು ಶ್ರಮಿಸಿದರು.

ತಡೆಗೋಡೆಗೆ ಮನವಿ
ದಶಕಗಳ ಹಿಂದೆ ನಿರ್ಮಾಣವಾದ ಈ ಕಿಂಡಿಅಣೆಕಟ್ಟಿಗೆ ತಡೆಗೋಡೆಯಿಲ್ಲದೇ ತೀರಾ ಅಪಾಯಕಾರಿಯಾಗಿದೆ. ಕಿಂಡಿ ಅಣೆಕಟ್ಟು ಮೇಲೆ ಸಂಚಾರ ನಿರ್ಬಂಧವಿದ್ದಾಗ್ಯೂ ದಿನಂಪ್ರತಿ ನೂರಾರು ದ್ವಿಚಕ್ರ, ಆಟೋ, ಟೆಂಪೋ, ಕಾರು ಸಂಚರಿಸುತ್ತಿದೆ. ತಡೆಗೋಡೆ ನಿರ್ಮಿಸುವಂತೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸದಿರುವುದು ವಿಪರ್ಯಾಸವೇ ಸರಿ.

ಸೇತುವೆಗಾಗಿ ಬೇಡಿಕೆ
ಕಿಂಡಿ ಅಣೆಕಟ್ಟು ಮೂಲಕ ಸಾಕಷ್ಟು ವಾಹನ ಸಂಚಾರ ನಡೆಸುವ ಕಾರಣ ಈ ಭಾಗದಲ್ಲಿ ಸೇತುವೆ ನಿರ್ಮಿಸುವಂತೆ ಕಾವೇರಡ್ಕ ನಿವಾಸಿಗಳು ಮನವಿ ಮಾಡಿರುತ್ತಾರೆ. ಸಂಭಾವ್ಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಇಲ್ಲೊಂದು ಸೇತುವೆ ನಿರ್ಮಾಣವಾಗುವುದು ಅತಿ ಅಗತ್ಯ.

ದಿನೇಶ್‌ ಪೂಜಾರಿ ಕಾವೇರಡ್ಕ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!