Thursday, December 2, 2021
spot_img
Homeಸ್ಥಳೀಯ ಸುದ್ದಿರಾಜ್ಯೋತ್ಸವ ಪ್ರಶಸ್ತಿಗೆ 28 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ - ಸಚಿವ ಸುನಿಲ್ ಕುಮಾರ್

ರಾಜ್ಯೋತ್ಸವ ಪ್ರಶಸ್ತಿಗೆ 28 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ – ಸಚಿವ ಸುನಿಲ್ ಕುಮಾರ್

ಕಾರ್ಕಳ ಸಾಹಿತ್ಯ ಸಂಘ ಬೆಳ್ಳಿ ಹಬ್ಬ

ಕಾರ್ಕಳ : ರಾಜ್ಯೋತ್ಸವ ಪ್ರಶಸ್ತಿಗೆ ಕಳೆದ ಬಾರಿ 2800 ಅರ್ಜಿ ಸಲ್ಲಿಕೆಯಾದಲ್ಲಿ ಈ ವರ್ಷ 28 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದೆ. ಇವರಲ್ಲಿ 66 ಮಂದಿಯನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸವಾಲು ಇಲಾಖೆಗೆ ಬಂದೊದಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ಅ. 16ರಂದು ಹೊಟೇಲ್ ಪ್ರಕಾಶ್‌ನ ಉತ್ಸವ ಸಭಾಂಗಣದಲ್ಲಿ ದಿ. ಪ್ರೊ. ಎಂ ರಾಮಚಂದ್ರ ವೇದಿಕೆಯಲ್ಲಿ ಸಾಹಿತ್ಯ ಸಂಘದ ಬೆಳ್ಳಿಹಬ್ಬ ವರ್ಷಾಚರಣೆ ಉದ್ಘಾಟಿಸಿ ಮಾತನಾಡಿದರು.

ಓದುವ ಸಂಸ್ಕೃತಿ ಜೀವಂತವಾಗಿದೆ
ಪುಸ್ತಕ ಓದುವ ಹವ್ಯಾಸ ಕಡಿಮೆಯಾದರೂ, ಮೊಬೈಲ್ ಮೂಲಕ ಸಾಹಿತ್ಯ ಓದುವ ಕಾರ್ಯವಾಗುತ್ತಿದೆ. ಹೀಗಾಗಿ ಓದುವ ಸಂಸ್ಕೃತಿ ಜೀವಂತವಾಗಿದೆ. ಹಾರ ತುರಾಯಿ ಬದಲು ಪುಸ್ತಕ ನೀಡಿ ಎಂಬ ನನ್ನ ಮನವಿಗೆ ಸುಮಾರು 4 ಸಾವಿರ ಪುಸ್ತಕ ಹರಿದುಬಂದಿರುವುದು ಪುಸ್ತಕ ಪ್ರೀತಿಗೆ ಉದಾಹರಣೆಯೆಂದರು.

ಸಾಂಸ್ಕೃತಿಕವಾಗಿಯೂ ಊರು ಬೆಳೆಯಬೇಕು
ಊರಿನ ಅಭಿವೃದ್ಧಿ ಅಂದರೆ ಅಲ್ಲಿನ ಕಟ್ಟಡ, ರಸ್ತೆ, ಸೇತುವೆ ಮಾತ್ರವಲ್ಲ. ಕಲೆ, ಸಾಂಸ್ಕೃತಿಕವಾಗಿ ಬೆಳೆದಲ್ಲಿ ಊರು ಪರಿಪೂರ್ಣವಾಗಿ ಬೆಳೆದಂತೆ ಎಂದು ಅಭಿಪ್ರಾಯಪಟ್ಟ ಸುನಿಲ್‌ ಕುಮಾರ್‌ ಅವರು ಪ್ರೊ. ರಾಮಚಂದ್ರ ಅವರ ಕನಸಿನ ಸಾಹಿತ್ಯ ಸಂಘ ಹತ್ತಾರು ರೀತಿಯ ಸಾಹಿತ್ಯ ಚಟುವಟಿಕೆಗಳನ್ನು ಸುದೀರ್ಘವಾಗಿ ಮಾಡಿಕೊಂಡು ಬಂದಿದೆ. ನಾಡಿನ ಶ್ರೇಷ್ಠ ಸಾಹಿತಿಗಳನ್ನು ಕಾರ್ಕಳಕ್ಕೆ ಕರೆದುಕೊಂಡು ಬಂದಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲು ಸಾಧ್ಯವಾಗುವ ಎಲ್ಲ ಸಹಕಾರವನ್ನು ಕಾರ್ಕಳ ಸಾಹಿತ್ಯ ಸಂಘಕ್ಕೆ ನೀಡಲಿದೆ ಎಂದರು.

ಸಾಹಿತ್ಯವೆಂದರೆ ಆಧ್ಯಾತ್ಮ
ಮಂಗಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಅಶಿರ್ವಚನ ನೀಡಿ ಸಮಾಜ ಬದಲಾವಣೆಯಲ್ಲಿ ಸಾಹಿತ್ಯದ ಕೊಡುಗೆ ಅಪಾರವಿದೆ. ಸಾಹಿತ್ಯ ಎಂದರೆ ಆಧ್ಯಾತ್ಮವೇ ಆಗಿದೆ ಎಂದರು.  ಈ ಸಂದರ್ಭದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಸನ್ಮಾನಿಸಲಾಯಿತು. 

ಮುಂಬೈ ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಆರ್. ತುಕಾರಾಮ ನಾಯಕ್, ಕೋಶಾಧಿಕಾರಿ ನಿತ್ಯಾನಂದ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಜಿ.ಎಸ್.‌ ನಟೇಶ್‌ ಶಿವಮೊಗ್ಗ ಅವರು ಮಂಕುತಿಮ್ಮನ ಕಗ್ಗದಲ್ಲಿ ಸಮನ್ವಯದ ಬದುಕು ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ. ಮೊಹನ್ ಆಳ್ವ ಸ್ವಾಗತಿಸಿ, ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಪ್ರೊ. ಬಿ. ಪದ್ಮನಾಭ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!