Tuesday, December 7, 2021
spot_img
Homeಸ್ಥಳೀಯ ಸುದ್ದಿಪೆರ್ವಾಜೆ ಶಾಲೆಯಲ್ಲಿ ಬಾಲೋಪಚಾರ ಪುಸ್ತಕ ಲೋಕಾರ್ಪಣೆ ಔಷಧೀಯ ಸಸ್ಯಾರೋಪಣ ಕಾರ್ಯಕ್ರಮ

ಪೆರ್ವಾಜೆ ಶಾಲೆಯಲ್ಲಿ ಬಾಲೋಪಚಾರ ಪುಸ್ತಕ ಲೋಕಾರ್ಪಣೆ ಔಷಧೀಯ ಸಸ್ಯಾರೋಪಣ ಕಾರ್ಯಕ್ರಮ

ಕಾರ್ಕಳ : ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ಆಯುಷ್ ಇಲಾಖೆ ಉಡುಪಿ, ತಾಲೂಕು ಶಿಕ್ಷಣಾಧಿಕಾರಿಗಳ ಕಚೇರಿ, ಆರೋಗ್ಯ ಭಾರತಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ‘ಬಾಲೋಪಚಾರ ಪುಸ್ತಕ ಲೋಕಾರ್ಪಣೆ’ ಹಾಗೂ ‘ಔಷಧೀಯ ಸಸ್ಯಾರೋಪಣ’ ಕಾರ್ಯಕ್ರಮ ಅ. 15ರಂದು ಜರುಗಿತು. ಸಚಿವ ವಿ. ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಆರೋಗ್ಯ ಭಾರತಿ ಜಿಲ್ಲಾ ಉಪಾಧ್ಯಕ್ಷ ಡಾ. ರಾಮದಾಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಶಿಕ್ಷಕ ಮುನಿರಾಜ್ ರೆಂಜಾಳ, ತಾಲೂಕು ಆರೋಗ್ಯ ಭಾರತಿಯ ಅಧ್ಯಕ್ಷ ಡಾ. ಸತ್ಯನಾರಾಯಣ ಭಟ್ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದೈಹಿಕ ಶಿಕ್ಷಣ ಸಂಯೋಜಕ ಸಿದ್ಧಪ್ಪ, ಮುಖ್ಯಶಿಕ್ಷಕಿ ಹರ್ಷಿಣಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ನಂದಾ ಜೆ. ಪೈ. ಸ್ವಾಗತಿಸಿ, ಶ್ರೀ ಭುವನೇಂದ್ರ ಹೈಸ್ಕೂಲಿನ ಸಹಶಿಕ್ಷಕ ನಾರಾಯಣ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶೈಲಜಾ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!