Saturday, October 16, 2021
spot_img
Homeಸ್ಥಳೀಯ ಸುದ್ದಿನೀರಿನಲ್ಲಿ ಕೊಚ್ಚಿ ಹೋಗಿ ಗ್ರಾಮ ಸಹಾಯಕ ದಾರುಣ ಸಾವು

ನೀರಿನಲ್ಲಿ ಕೊಚ್ಚಿ ಹೋಗಿ ಗ್ರಾಮ ಸಹಾಯಕ ದಾರುಣ ಸಾವು

ಕಾರ್ಕಳ: ಮಂಗಳವಾರ ಸುರಿದ ಭಾರೀ ಮಳೆಗೆ ಕಾರ್ಕಳ ತಾಲೂಕಿನ ನಿಂಜೂರಿನಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಕಾರ್ಕಳ ತಾಲೂಕಿನ ನಿಂಜೂರು ಗ್ರಾಮದ ಕುಕ್ಕಿಕಟ್ಟೆ ಎಂಬಲ್ಲಿನ‌ ನಿವಾಸಿ ಸಂಜೀವ ಹಾಂಡ(59) ಎಂಬವರು ಮೃತಪಟ್ಟವರು. ಸಂಜೀವ ಹಾಂಡ ಕಳೆದ ಹಲವು ವರ್ಷಗಳಿಂದ ನಿಂಜೂರಿನಲ್ಲಿ ಗ್ರಾಮ‌ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದು ನಿತ್ಯ ಸೈಕಲಿನಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಮಂಗಳವಾರ ಬೆಳಗ್ಗಿನಿಂದಲೇ ಭಾರೀ ಮಳೆಯ ಕಾರಣದಿಂದ ಬಸ್ಸಿನಲ್ಲಿ ಕಚೇರಿಗೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ ಮನೆಗೆ ಬರುತ್ತಿದ್ದ ಸಂಜೀವ ಹಾಂಡ ಕತ್ತಲಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮನೆಯವರು ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮರುದಿನ ಬೆಳಗ್ಗೆ ನಿಂಜೂರಿನ ಕೊಡಮಣಿತ್ತಾಯ ದೈವಸ್ಥಾನದ ಬಳಿಯ ನೀರಿನ ತೋಡಿನಲ್ಲಿ ಸಂಜೀವ ಹಾಂಡರವರ ಶವ ಪತ್ತೆಯಾಗಿದೆ. ಭಾರೀ ಮಳೆಗೆ ಸಂಜೀವ ಹಾಂಡ ನಡೆದುಕೊಂಡು ಬರುತ್ತಿದ್ದ ವೇಳೆ ಕಾಲುಜಾರಿ ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಯಿದೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!