Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ನಾಲ್ಕು ಮನೆಗಳಲ್ಲಿ ವಿದ್ಯುತ್‌ ಅವಘಡ

ಕಾರ್ಕಳ : ನಾಲ್ಕು ಮನೆಗಳಲ್ಲಿ ವಿದ್ಯುತ್‌ ಅವಘಡ

ಕಾರ್ಕಳ : ವಿದ್ಯುತ್‌ ಅವಘಡ ಸಂಭವಿಸಿ ತೆಳ್ಳಾರು ಬೆದ್ರಪಲ್ಕೆ ಪರಿಸರದ ನಾಲ್ಕು ಮನೆಗಳ ವೈರಿಂಗ್‌ ಸುಟ್ಟು ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಹಾನಿಗೀಡಾಗಿದೆ. ಅ. 13ರಂದು ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸ್ಥಳೀಯ ಮನೆಗಳಲ್ಲಿ ವೈರಿಂಗ್ ಸುಟ್ಟು ಹೋಗಿ ಟಿವಿ, ಫ್ಯಾನ್, ಬಲ್ಬ್ ಹಾನಿಯಾಗಿರುತ್ತದೆ. ಮೋಹಿನಿ ಗೌಡ, ಗೋವಿಂದ ನಾಯ್ಕ, ಶಶಿಧರ ಶೆಟ್ಟಿ ಹಾಗೂ ಲಲಿತ ನಾಯ್ಕ ಅವರ ಮನೆಯ ವಿದ್ಯುತ್ ಪರಿಕರ ಹಾನಿಗೀಡಾಗಿದೆ. ಘಟನೆ ಸಂಭವಿಸಿದ ಮನೆಗಳಿಗೆ ದುರ್ಗ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಸದಸ್ಯೆಯರಾದ ದೇವಕಿ, ಪ್ರಮೀಳಾ ಆಚಾರ್ಯ ಭೇಟಿ ನೀಡಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!