Saturday, October 16, 2021
spot_img
Homeಸ್ಥಳೀಯ ಸುದ್ದಿಸಾಣೂರು ಪೆಟ್ರೋಲ್‌ ಪಂಪ್‌ ಕಚೇರಿ ಬೀಗ ಮುರಿದ ಕಳ್ಳನ ಬಂಧನ

ಸಾಣೂರು ಪೆಟ್ರೋಲ್‌ ಪಂಪ್‌ ಕಚೇರಿ ಬೀಗ ಮುರಿದ ಕಳ್ಳನ ಬಂಧನ

ಆರೋಪಿ ಸಂತೋಷ್‌ನ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ

ಕಾರ್ಕಳ : ಕಾರ್ಕಳ ಸಾಣೂರು ಸಿದ್ಧಿವಿನಾಯಕ ಪೆಟ್ರೋಲ್ ಬಂಕ್‌ ಬೀಗ ಮುರಿದು ಕಳ್ಳತನ ಮಾಡಿರುವ ಆರೋಪಿಯನ್ನು ಕಾರ್ಕಳ ನಗರ ಪೊಲೀಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಡಬಿದ್ರೆ ತಾಲೂಕು ಬೆಳ್ವಾಯಿ ಗ್ರಾಮದ ಮುಡಾಯಿಕಾಡು ಮನೆ ಸಂತೋಷ್‌ ಶೆಟ್ಟಿ ಬಂಧಿತ ಆರೋಪಿ. ಈತ ಅಕ್ಟೋಬರ್‌ 6ರ ರಾತ್ರಿ ಪೆಟ್ರೋಲ್‌ ಬಂಕ್‌ನಲ್ಲಿ ಕಳ್ಳತನ ನಡೆಸುವ ವಿಡಿಯೋ, ಫೋಟೋವನ್ನು ಸಾಮಾಜಿಕ‌ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದನ್ನು ನೋಡಿದ ಓರ್ವರು ಈತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಕ್ಟೋಬರ್‌ 12ರಂದು ಬೆಳುವಾಯಿ ಕಡೆಯಿಂದ ಕಾರ್ಕಳ ಕಡೆಗೆ ಮೋಟಾರು ಸೈಕಲ್ ನಲ್ಲಿ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಕಾರ್ಕಳ ಪೊಲೀಸರು ಸಾಣೂರು ಚೆಕ್‌ ಪೋಸ್ಟ್ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾನೆ.

ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಠಾಣೆ ಎಸ್‌ಐ ಮಧು ಬಿ.ಇ. ಹಾಗೂ ಅವರ ತಂಡ ಕಾರ್ಯಾಚರಣೆ ನಡೆಸಿದ್ದರು.

ಹಲವು ಪ್ರಕರಣ
ಸಂತೋಷ್‌ ಶೆಟ್ಟಿ ವಿರುದ್ಧ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. 26-07-2020 ರಂದು ಕಾರ್ಕಳ ಅನಂತಶಯನದಲ್ಲಿರುವ ಸ್ಟೇಟ್ ಬ್ಯಾಂಕ್ ಎಟಿಎಂ ಒಡೆದು ಕಳವಿಗೆ ಯತ್ನಿಸಿದ್ದ. ಕೊಡ್ಯಡ್ಕ ಪೆಟ್ರೋಲ್ ಪಂಪ್‌ ಬೀಗ ಒಡೆದು ಕಳ್ಳತನಕ್ಕೆ ಪ್ರಯತ್ನಿಸಿದ್ದ. ಈತನ ಮೇಲೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ, ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಹಾಗೂ ಮನೆಗೆ ಬೆಂಕಿ ಹಾಕಿದ ಪ್ರಕರಣ ದಾಖಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!