Saturday, October 16, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಧಾರಾಕಾರ ಮಳೆ

ಕಾರ್ಕಳ : ಧಾರಾಕಾರ ಮಳೆ

ಕೆದಿಂಜೆ 208.0 ಮಿ.ಮೀ. ದಾಖಲೆ ಮಳೆ

ಮುಂದಿನ ನಾಲ್ಕು ದಿನ ಮಳೆ ಸಾಧ್ಯತೆ

ಕಾರ್ಕಳ : ಮಂಗಳವಾರ ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಬಿರುಸಿನ ಮಳೆಯಾಗಿದೆ. ಇಡೀ ದಿನ ನಿರಂತರವಾಗಿ ಮಳೆ ಸುರಿದಿದ್ದು, ಕಾರ್ಕಳ 111.6 ಮಿ.ಮೀ., ಇರ್ವತ್ತೂರು 138.6 ಮಿ.ಮೀ., ಅಜೆಕಾರು 151.6 ಮಿ.ಮೀ., ಸಾಣೂರು 162.8 ಮಿ.ಮೀ., ಕೆದಿಂಜೆ 208.0 ಮಿ.ಮೀ., ಮುಳಿಕ್ಕಾರು 154.6 ಮಿ.ಮೀ., ಕೆರ್ವಾಶೆ : 104.2 ಮಿ.ಮೀ. ಮಳೆಯಾಗಿದೆ. ಸರಾಸರಿ 146.86 ಪ್ರಮಾಣದಲ್ಲಿ ದಾಖಲೆ ಎಂಬಂತೆ ಮಳೆ ಸುರಿದಿದೆ.

ಧಾರಾಕಾರ ಮಳೆಗೆ ಕಾರ್ಕಳ ಪೇಟೆಯ ರಸ್ತೆ ಹೊಂಡಗಳು ನೀರಿನಿಂದ ಆವೃತ್ತವಾಗಿತ್ತು. ಹೀಗಾಗಿ ಹೊಂಡ ಗುರುತಿಸಲಾರದೇ ದ್ವಿಚಕ್ರ ಸವಾರರು ಅಪಘಾತಕ್ಕೀಡಾದ ಘಟನೆಯೂ ಮಂಗಳವಾರ ರಾತ್ರಿ ಸಂಭವಿಸಿದೆ. ಬೆಳ್ಮಣ್‌ ಪರಿಸರದಲ್ಲಿ 4 ವಿದ್ಯುತ್‌ ಕಂಬ ಧರೆಗುರುಳಿದೆ.

ದೇಗುಲದಲ್ಲಿ ಜನವಿರಳ
ನವರಾತ್ರಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಯಿತ್ತಾದರೂ ಮಳೆಯ ಕಾರಣದಿಂದ ಬಹುತೇಕ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು.

ಮುಂದಿನ ನಾಲ್ಕು ದಿನ ಮಳೆ ಸಾಧ್ಯತೆ
ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದ ಅಲೆ ಕೂಡ ಹೆಚ್ಚಿರುವ ಕಾರಣ ಮೀನುಗಾರರು ಜಾಗ್ರತೆಯಿಂದಿರುವಂತೆಯೂ ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!