Saturday, October 16, 2021
spot_img
HomeUncategorizedತೆಳ್ಳಾರು : ಸರಣಿ ಅಪಘಾತ

ತೆಳ್ಳಾರು : ಸರಣಿ ಅಪಘಾತ

ಕಾರು- ರಿಕ್ಷಾ-ಬೈಕ್‌ ಡಿಕ್ಕಿ – ಆಟೋ ಚಾಲಕನಿಗೆ ಗಾಯ

ಕಾರ್ಕಳ : ಕಾರ್ಕಳದಿಂದ ತೆಳ್ಳಾರು ಸಾಗುತ್ತಿದ್ದ ಕಾರು (ಕೆಎ 19. ಎಂಇ 139) ಹಾಗೂ ತೆಳ್ಳಾರು ಕಡೆಯಿಂದ ಕಾರ್ಕಳ ಬರುತ್ತಿದ್ದ ಆಟೋ ರಿಕ್ಷಾ (ಕೆಎ 20ಎ ಎ9023) ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ತೆಳ್ಳಾರು ಸಮೀಪದ ಪಲಯಿಬಾಕ್ಯಾರು ಎಂಬಲ್ಲಿ ಸಂಭವಿಸಿದೆ. ಪರಿಣಾಮ ಆಟೋ ಚಾಲಕ ಕುಕ್ಕುಂದೂರು ಗ್ರಾಮದ ಸಂತೋಷ್ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಟೋ ಹಿಂದಿದ್ದ‌ ಬೈಕ್‌ ಆಟೋಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿ ತೆಳ್ಳಾರು ಸಮೀಪದ ಆದರ್ಶ್‌‌ ಹೆಗ್ಡೆ ದಂಪತಿಯಿದ್ದು, ಆದರ್ಶ್‌ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಆದರ್ಶ್‌ ಅವರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಹಾಗೂ ಆಟೋ ಮುಂಭಾಗ ನಜ್ಜುಗುಜ್ಜಾಗಿದೆ.

ರಸ್ತೆ ತಡೆ
ಅಪಘಾತದಿಂದಾಗಿ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆಯುಂಟಾಯಿತು. ಗಾಯಗೊಂಡಿರುವ ಆಟೋ ಚಾಲಕರನ್ನು ಪಡ್ಡಿಬೆಟ್ಟು ರಫೀಕ್‌ ಅವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕರೆದುಕೊಂಡು ಹೋಗಿರುತ್ತಾರೆ. ದುರ್ಗಾ ಪಂಚಾಯತ್‌ ಅಧ್ಯಕ್ಷ ಸತೀಶ್‌ ನಾಯಕ್‌, ರಾಜೇಶ್‌ ಶೆಟ್ಟಿ ಮೊದಲಾದವರು ಸಹಕರಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!