Tuesday, December 7, 2021
spot_img
Homeಸ್ಥಳೀಯ ಸುದ್ದಿಕುಕ್ಕುಂದೂರು : ಸುಧಾರಿತ ಕಾರ್ಲ ಕಜೆ ಭತ್ತದ ಬೆಳೆ ಕ್ಷೇತ್ರೋತ್ಸವ

ಕುಕ್ಕುಂದೂರು : ಸುಧಾರಿತ ಕಾರ್ಲ ಕಜೆ ಭತ್ತದ ಬೆಳೆ ಕ್ಷೇತ್ರೋತ್ಸವ

ಕಾರ್ಕಳ : ರೊಟ್ಟಿ ತಿಂದವನು ಗಟ್ಟಿಯಾಗುತ್ತಾನೆ, ಅನ್ನ ತಿಂದವನು ಸಪೂರವಾಗುತ್ತಾನೆ ಎಂಬ ಗಾದೆ ಮಾತೊಂದಿದೆ. ಆದರೆ, ಕಾರ್ಲ ಕಜೆ ಅನ್ನದಲ್ಲಿ ಪೋಷಕಾಂಶ ಹೇರಳವಾಗಿದೆ ಎಂದು ಶಿವಮೊಗ್ಗ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಮೃತ್ಯುಂಜಯ ಸಿ. ವಾಲಿ ಹೇಳಿದರು.
ಅವರು ಅ. 10ರಂದು ಕುಕ್ಕುಂದೂರು ಗ್ರಾಮದ ಪ್ರಗತಿಪರ ಕೃಷಿಕ ಎಂ. ಜಗನ್ನಾಥ ಪೈ ಅವರ ಮನೆ ಆವರಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಮತ್ತು ಅಖಿಲ ಭಾರತೀಯ ಸಮನ್ವಯ ಭತ್ತ ಅಭಿವೃದ್ಧಿ ಯೋಜನೆ ಹೈದಾರಬಾದ್‌ ಇವರ ಸಹಯೋಗದಲ್ಲಿ ನಡೆದ ಸುಧಾರಿತ ಕಾರ್ಲ ಕಜೆ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಕ್ಕುಂದೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಶಿಮಣಿ ಸಂಪತ್‌ ಅಧ್ಯಕ್ಷತೆ ವಹಿಸಿದ್ದರು. ಇಲಾಖಾಧಿಕಾರಿಗಳಾದ ಡಾ. ಬಿ. ಹೇಮಾ ನಾಯಕ್‌, ಡಾ. ಎಸ್.ಯು. ಪಾಟೀಲ್‌, ಹೆಚ್.‌ ಕೆಂಪೇಗೌಡ, ಅಬ್ದುಲ್‌ ಮಜೀದ್‌, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ನಿ.ದ ಅಧ್ಯಕ್ಷ ಅಂತೋನಿ ಡಿ ಸೋಜಾ, ಪಂಚಾಯತ್ ಉಪಾಧ್ಯಕ್ಷ ಅನಿಲ್‌ ಪೂಜಾರಿ, ಡಾ. ಕೆ.ವಿ. ಸುಧೀರ್‌ ಕಾಮತ್‌‌, ಡಾ. ಬಿ. ಧನಂಜಯ, ಶ್ರೀನಿವಾಸ್‌ ಬಿ.ಎ., ನವೀನ್‌ ಚಂದ್ರ ಜೈನ್‌, ವಿನೋದ ಆರ್.ಎ., ಡಾ. ಜಯಪ್ರಕಾಶ್‌ ಎಸ್.‌ ಎಂ., ಡಾ. ಶಂಕರ್‌ ಎಂ. ಪ್ರಗತಿ ಪರ ಕೃಷಿ ಮಹಿಳೆ ಜ್ಯೋತಿ ಜೆ. ಪೈ, ಡಾ. ಶ್ರೀದೇವಿ ಜಕ್ಕೆರಾಳ ಉಪಸ್ಥಿತರಿದ್ದರು.

ಗಣೇಶ್‌ ಗಂಗೋಳ್ಳಿ ಮತ್ತು ತಂಡದವರು ರೈತ ಗೀತೆ ಹಾಡಿದರು. ಹೃದ್ವಿ ಭಟ್‌ ಹಾಗೂ ವೇದ ಭಟ್‌ ಪ್ರಾರ್ಥಿಸಿದರು. ಸಹ ಸಂಶೋಧನಾ ನಿರ್ದೇಶಕರಾದ ಡಾ. ಲಕ್ಷ್ಮಣ್‌ ಸ್ವಾಗತಿಸಿ, ಗಣೇಶ್‌ ಬೆಳ್ವೆ ನಿರೂಪಿದರು. ಡಾ. ಬಿ. ಧನಂಜಯ್‌ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!